×
Ad

ಬೈರೂತ್ ಉಪನಗರಗಳ ಮೇಲೆ ಇಸ್ರೇಲ್ ನಿಂದ ಕ್ಷಿಪಣಿ ದಾಳಿ; ಹಿಝ್ಬುಲ್ಲಾ ನಾಯಕರೇ ಗುರಿ!

Update: 2026-05-28 23:55 IST

PC | bbc.com

ಬೈರೂತ್, ಮೇ 28: ಲೆಬನಾನ್ ರಾಜಧಾನಿ ಬೈರೂತ್‌ ನ ದಕ್ಷಿಣ ಉಪನಗರಗಳ ಮೇಲೆ ಗುರುವಾರ ಇಸ್ರೇಲ್ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಕಳೆದ ಕೆಲವು ವಾರಗಳಲ್ಲಿ ಬೈರೂತ್ ಸಮೀಪ ಇಸ್ರೇಲ್ ನಡೆಸಿರುವ ಮೊದಲ ದಾಳಿಯಿದು.

ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಸೇನೆ ಮತ್ತು ಹಿಝ್ಬುಲ್ಲಾ ನಡುವೆ ನಡೆಯುತ್ತಿದ್ದ ಕಾಳಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಘೋಷಿಸಲಾಗಿದ್ದ ಕದನ ವಿರಾಮದ ಬಳಿಕವೂ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಈ ದಾಳಿ ನಡೆದಿದೆ.

ಬೈರೂತ್ ಮೇಲೆ ‘ನಿಖರ ದಾಳಿ’ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೆ ನೀಡಿದೆ. ಆದರೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಹಿಝ್ಬುಲ್ಲಾ ಹಾಗೂ ಇರಾನ್ ಬೆಂಬಲಿತ ಘಟಕದ ಕ್ಷಿಪಣಿ ವಿಭಾಗದ ಮುಖ್ಯಸ್ಥ ಇಮಾನ್ ಹುಸೈನ್ ಅವರನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ನ ಎರಡು ಭದ್ರತಾ ಮೂಲಗಳು ತಿಳಿಸಿವೆ.

ಬೈರೂತ್‌ನ ದಕ್ಷಿಣ ಉಪನಗರಗಳಲ್ಲಿನ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಎರಡು ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ಲೆಬನಾನ್ ಭದ್ರತಾ ಮೂಲವೊಂದು ಮಾಹಿತಿ ನೀಡಿದೆ.

ಈ ದಾಳಿಗೆ ಸಂಬಂಧಿಸಿ ಹಿಝ್ಬುಲ್ಲಾ ಅಥವಾ ಇರಾನ್‌ನಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹಿಝ್ಬುಲ್ಲಾ ನಡುವಿನ ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ, ಅದನ್ನು ತಾತ್ಕಾಲಿಕವಾಗಿ ತಡೆಯಲು ಅಮೆರಿಕ ಎಪ್ರಿಲ್ 16ರಂದು ಕದನ ವಿರಾಮ ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News