×
Ad

ಲೆಬನಾನ್| ಇಸ್ರೇಲ್ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತ್ಯು

Update: 2026-05-23 19:43 IST

Photo Credit : aljazeera.com

ಬೈರೂತ್, ಮೇ 23: ದಕ್ಷಿಣ ಮತ್ತು ಪೂರ್ವ ಲೆಬನಾನ್‍ನಲ್ಲಿ ಶನಿವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕನಿಷ್ಠ 10 ಮಂದಿ ಮೃತಪಟ್ಟಿರುವುದಾಗಿ ಲೆಬನಾನ್ ಸರಕಾರ ಹೇಳಿದೆ.

ಸಿರಿಯಾದ ಗಡಿಭಾಗದ ಸಮೀಪದ ಪ್ರದೇಶ, ಬ್ರಿಟಲ್‍ನ ಹೊರವಲಯದ ನಬಿ ಶ್ರೀಜ್ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಇಸ್ರೇಲ್ ಐದು ವೈಮಾನಿಕ ದಾಳಿ ನಡೆಸಿದೆ ಎಂದು ಸರಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ದಕ್ಷಿಣದ ಟೈರ್ ನಗರದಲ್ಲಿ ದಾಳಿಯ ಬಳಿಕ ಕಟ್ಟಡವೊಂದರಲ್ಲಿ ಸ್ಫೋಟ ಸಂಭವಿಸಿದ್ದು ಸಮೀಪದ ಜನವಸತಿ ಪ್ರದೇಶದ ಮೇಲೆಯೂ ದಾಳಿ ನಡೆದಿರುವುದಾಗಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News