×
Ad

ಪಾಕಿಸ್ತಾನದಲ್ಲೂ ಸದ್ದು ಮಾಡಿದ `ಕಾಕ್ರೋಚ್': ಕಾಕ್ರೋಚ್ ಅವಾಮಿ ಪಾರ್ಟಿ ಅಸ್ತಿತ್ವಕ್ಕೆ

Update: 2026-05-22 21:48 IST

Photo Credit : X 

ಇಸ್ಲಮಾಬಾದ್, ಮೇ 22: ಭಾರತದಲ್ಲಿ ಖ್ಯಾತಿ ಪಡೆದಿರುವ `ಕಾಕ್ರೋಚ್ ಜನತಾ ಪಾರ್ಟಿ'ಯ ಅಲೆ ಈಗ ಗಡಿದಾಟಿ ಪಾಕಿಸ್ತಾನದಲ್ಲಿ ಕಾಕ್ರೋಚ್ ಅವಾಮಿ ಪಾರ್ಟಿ(ಸಿಎಪಿ) ಮತ್ತು ಕಾಕ್ರೋಚ್ ಅವಾಮಿ ಲೀಗ್(ಸಿಎಎಲ್) ಸ್ಥಾಪನೆಗೆ ಪ್ರೇರಣೆ ನೀಡಿದೆ ಎಂದು ವರದಿಯಾಗಿದೆ.

ವಿಡಂಬನಾತ್ಮಕವಾಗಿ ತನ್ನ ಪಯಣವನ್ನು ಆರಂಭಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಶೀಘ್ರದಲ್ಲೇ ರಾಜಕೀಯ ಚಳುವಳಿಯಾಗಿ ಮಾರ್ಪಟ್ಟಿದ್ದು ಇನ್‍ಸ್ಟಾಗ್ರಾಮ್‍ನಲ್ಲಿ 19 ದಶಲಕ್ಷಕ್ಕೂ ಹೆಚ್ಚು `ಫಾಲೋವರ್ಸ್'ಗಳ ಬೆಂಬಲ ಪಡೆದಿದೆ. ಇದರಿಂದ ಪ್ರೇರಣೆ ಪಡೆದ ಪಾಕಿಸ್ತಾನದ ಯುವಜನತೆ ಕಾಕ್ರೋಚ್ ಅವಾಮಿ ಪಾರ್ಟಿ(ಸಿಎಪಿ) ಮತ್ತು ಕಾಕ್ರೋಚ್ ಅವಾಮಿ ಲೀಗ್(ಸಿಎಎಲ್) ಇತ್ಯಾದಿ ಹಲವು ಗ್ರೂಫ್‍ಗಳನ್ನು ರಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News