×
Ad

ಮ್ಯಾನ್ಮಾರ್ | ವಾಯು ದಾಳಿಯಲ್ಲಿ 11 ನಾಗರಿಕರು ಮೃತ್ಯು

Update: 2024-09-06 23:13 IST

Photo Credit: AFP

ಯಾಂಗಾನ್ : ಉತ್ತರದ ಶಾನ್ ರಾಜ್ಯದಲ್ಲಿ ಮ್ಯಾನ್ಯಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 11 ನಾಗರಿಕರು ಸಾವನ್ನಪ್ಪಿದ್ದು ಇತರ 11 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.

ಶಾನ್ ರಾಜ್ಯದ ನಮ್ಕಾಮ್ ನಗರದ ಎರಡು ಪ್ರದೇಶಗಳ ಮೇಲೆ ಸೇನೆಯ ವಿಮಾನಗಳು ಬಾಂಬ್ ದಾಳಿ ನಡೆಸಿವೆ ಎಂದು ಸೇನಾಡಳಿತದ ವಿರುದ್ಧ ಹೋರಾಡುತ್ತಿರುವ ಜನಾಂಗೀಯ ಅಲ್ಪಸಂಖ್ಯಾತ ಸಶಸ್ತ್ರ ಹೋರಾಟಗಾರರ ಗುಂಪು ` ತಾಂಗ್ ನ್ಯಾಷನಲ್ ಲಿಬರೇಷನ್ ಆರ್ಮಿ(ಟಿಎನ್ಎಲ್ಎ) ವಕ್ತಾರೆ ಲಾಯ್ ಯಾಯ್ ಊವ್ ಹೇಳಿದ್ದಾರೆ.

ಬಾಂಬ್ ದಾಳಿಯಲ್ಲಿ 4 ಮಹಿಳೆಯರು, ಇಬ್ಬರು ಮಕ್ಕಳ ಸಹಿತ 11 ಮಂದಿ ಸಾವನ್ನಪ್ಪಿದ್ದು 11 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ರಾಜಕೀಯ ಪಕ್ಷದ ಕಚೇರಿಗೆ ಹಾನಿಯಾಗಿದೆ ಎಂದವರು ಮಾಹಿತಿ ನೀಡಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News