ಪಶ್ಚಿಮ ದಂಡೆಯಲ್ಲಿ ಮನೆ ಧ್ವಂಸಕ್ಕೆ ನೆತನ್ಯಾಹು ಆದೇಶ

Update: 2026-07-24 22:00 IST

ಬೆಂಜಮಿನ್ ನೆತನ್ಯಾಹು | Photo Credit : PTI 

ಟೆಲ್ ಅವೀವ್, ಜು.24: ಪಶ್ಚಿಮ ದಂಡೆಯ `ಟೆಲ್' ಗ್ರಾಮದ ಬಳಿ ಶುಕ್ರವಾರ ಬೆಳಿಗ್ಗೆ ಇಸ್ರೇಲ್‍ನ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಫೆಲೆಸ್ತೀನ್ ಬಂದೂಕುಧಾರಿಯ ಮನೆಯನ್ನು ಧ್ವಂಸಗೊಳಿಸಲು ಮತ್ತು ಜುದೇಯ ಹಾಗೂ ಸಮಾರಿಯಾ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿರುವ ಕೃಷಿಭೂಮಿಗಳ ಸಕ್ರಮಗೊಳಿಸುವಿಕೆ ಹಾಗೂ ಹೊಸ ಕೃಷಿ ವಸಾಹತುಗಳ ಸ್ಥಾಪನೆಯನ್ನು ವೇಗಗೊಳಿಸಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್‌ ಅವರು ಇಸ್ರೇಲ್ ರಕ್ಷಣಾ ಪಡೆಗಳಿಗೆ ಆದೇಶಿಸಿದ್ದಾರೆ.

ಘರ್ಷಣೆಯ ಸಂದರ್ಭದಲ್ಲಿ ದಾಳಿಕೋರನು ನಾಗರಿಕ ಭದ್ರತಾ ಅಧಿಕಾರಿಯಿಂದ ಆಯುಧವನ್ನು ಕಸಿದುಕೊಂಡು ದಾಳಿ ನಡೆಸಿದ್ದು, ಈ ಘಟನೆಯಲ್ಲಿ 32 ವರ್ಷದ ಬೆನಾಯಾಹು ಮೆಲ್ಲೆಟ್ ಎಂಬುವವರು ಮೃತಪಟ್ಟು, ಇತರ ನಾಲ್ಕು ಇಸ್ರೇಲ್‌ ಪ್ರಜೆಗಳು ಗಾಯಗೊಂಡಿದ್ದಾರೆ ಎಂದು `ಜೆರುಸಲೇಮ್ ಪೋಸ್ಟ್' ವರದಿ ಮಾಡಿದೆ.

ಈ ಮಧ್ಯೆ, ಪಶ್ಚಿಮದಂಡೆಯ ಉತ್ತರ ಭಾಗದ ಟೆಲ್ ಗ್ರಾಮದಲ್ಲಿ ಇಸ್ರೇಲ್‌ ಮಿಲಿಟರಿ ನಾಲ್ಕು ಫೆಲೆಸ್ತೀನಿಯರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News