×
Ad

ಇರಾನ್ - ಇಸ್ರೇಲ್ ಉದ್ವಿಗ್ನತೆ | ಇಂದು ನೆತನ್ಯಾಹು ಭದ್ರತಾ ಸಂಪುಟ ಸಭೆ

Update: 2026-06-08 11:40 IST

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Photo: PTI)

ಜೆರುಸಲೇಮ್: ಇರಾನ್‌ ನೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೋಮವಾರ ಸ್ಥಳೀಯ ಸಮಯ ಬೆಳಿಗ್ಗೆ 11 ಗಂಟೆಗೆ (GMT 08:00) ಭದ್ರತಾ ಸಂಪುಟ ಸಭೆ ನಡೆಸಲಿದ್ದಾರೆ.

ಹೆಸರನ್ನು ಬಹಿರಂಗಪಡಿಸದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ‘ಟೈಮ್ಸ್ ಆಫ್ ಇಸ್ರೇಲ್’ ವರದಿ ಮಾಡಿದ್ದು, ಇದು ಪ್ರಮುಖ ಸಚಿವರು ಮಾತ್ರ ಭಾಗವಹಿಸುವ ಸಭೆಯಾಗಿರಲಿದೆ ಎಂದು ತಿಳಿಸಿದೆ.

ಇರಾನ್‌ನೊಂದಿಗೆ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿ, ಇತ್ತೀಚಿನ ಭದ್ರತಾ ಬೆಳವಣಿಗೆಗಳು ಹಾಗೂ ಮುಂದಿನ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News