×
Ad

ಇಸ್ರೇಲ್‍ನಲ್ಲಿ ಗುಂಡಿನ ದಾಳಿ | ಓರ್ವ ಮೃತ್ಯು; ನಾಲ್ವರಿಗೆ ಗಾಯ

Update: 2026-06-07 23:36 IST

ಸಾಂದರ್ಭಿಕ ಚಿತ್ರ | AI

ಟೆಲ್‍ಅವೀವ್, ಜೂ.7: ಮಧ್ಯ ಇಸ್ರೇಲ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇತರ ನಾಲ್ವರು ಗಾಯಗೊಂಡಿರುವುದಾಗಿ ಇಸ್ರೇಲ್‍ನ ತುರ್ತು ಸೇವಾ ಇಲಾಖೆಯ ಮೂಲಗಳು ರವಿವಾರ ಹೇಳಿವೆ.

ಪಶ್ಚಿಮ ದಂಡೆಯ ಕೆಲ ಮೀಟರ್ ದೂರದಲ್ಲಿರುವ ಟಜುರ್ ನಟಾನ್ ಪ್ರದೇಶದ ಬಳಿ ಒಬ್ಬ ವ್ಯಕ್ತಿ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದೇ ಪ್ರದೇಶದಲ್ಲಿ ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೊಖಾವ್ ಯಾಯಿರ್ ನಗರದ ಗ್ಯಾಸ್ ಸ್ಟೇಷನ್ ಬಳಿ ನಡೆದ ಮತ್ತೊಂದು ಗುಂಡಿನ ದಾಳಿಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು ಓರ್ವ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News