×
Ad

ಅಯೋಧ್ಯೆಯಲ್ಲಿ ಹೊಸ ಬಾಬರಿ ಮಸೀದಿಯ ಇಟ್ಟಿಗೆಯನ್ನು ಪಾಕ್ ಸೈನಿಕರು ಇಡಲಿದ್ದಾರೆ: ಪಾಕ್ ಸಂಸದೆಯ ಪ್ರಚೋದನಕಾರಿ ಹೇಳಿಕೆ

Update: 2025-04-30 21:44 IST

ಪಲ್ವಾಷಾ ಮುಹಮ್ಮದ್ ಝಾಯಿಖಾನ್ | PC : X 

ಇಸ್ಲಾಮಾಬಾದ್: ಅಯೋಧ್ಯೆಯ ವಿಷಯದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಪಾಕಿಸ್ತಾನದ ಸಂಸದೆ ಪಲ್ವಾಷಾ ಮುಹಮ್ಮದ್ ಝಾಯಿಖಾನ್ `ಅಯೋಧ್ಯೆಯಲ್ಲಿ ಹೊಸ ಬಾಬರಿ ಮಸೀದಿ ನಿರ್ಮಾಣಕ್ಕೆ ಪ್ರಥಮ ಇಟ್ಟಿಗೆಯನ್ನು ಪಾಕಿಸ್ತಾನದ ಸೈನಿಕರು ಇಡಲಿದ್ದಾರೆ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅಝಾನ್ ನೀಡಲಿದ್ದಾರೆ' ಎಂದಿದ್ದಾರೆ.

ಪಾಕ್ ಸಂಸತ್‍ನ ಮೇಲ್ಮನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ` ನಾವೇನೂ ಬಳೆ ತೊಟ್ಟುಕೊಂಡಿಲ್ಲ. ಒಂದು ವೇಳೆ ಯುದ್ಧ ಆರಂಭಗೊಂಡರೆ ಸಿಖ್ ಯೋಧರು ಪಾಕಿಸ್ತಾನದ ಮೇಲೆ ದಾಳಿ ಮಾಡುವುದಿಲ್ಲ. ಯಾಕೆಂದರೆ ಪಾಕಿಸ್ತಾನವು ಅವರಿಗೆ ಗುರು ನಾನಕರ ಭೂಮಿಯಾಗಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News