×
Ad

ಪಶ್ಚಿಮದಂಡೆ: ಇಸ್ರೇಲ್ ಸೇನೆಯಿಂದ ಐವರು ಫೆಲೆಸ್ತೀನೀಯರ ಹತ್ಯೆ

Update: 2025-05-16 22:04 IST

PC : aljazeera.com

ರಮಲ್ಲಾ: ಆಸ್ಪತ್ರೆಗೆ ತೆರಳುತ್ತಿದ್ದ ಇಸ್ರೇಲ್ ಮೂಲದ ಗರ್ಭಿಣಿಯನ್ನು ಗುಂಡಿಕ್ಕಿ ಹತ್ಯೆಗೈದ ಬಳಿಕ ಇಸ್ರೇಲ್ ಮಿಲಿಟರಿ ಆಕ್ರಮಿತ ಪಶ್ಚಿಮದಂಡೆಯಲ್ಲಿ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಮಂದಿ ಫೆಲೆಸ್ತೀನೀಯರು ಹತರಾಗಿರುವುದಾಗಿ ವರದಿಯಾಗಿದೆ.

ತಮೌನ್ ನಗರದಲ್ಲಿನ ಕಟ್ಟಡವೊಂದರಲ್ಲಿ ಅವಿತಿದ್ದ ಐವರನ್ನು ಹತ್ಯೆ ಮಾಡಿದ್ದು ಮತ್ತೊಬ್ಬನನ್ನು ಬಂಧಿಸಿರುವುದಾಗಿ ಮಿಲಿಟರಿ ಹೇಳಿದೆ. ತಮೌನ್ ನಗರದಲ್ಲಿನ ಮನೆಯನ್ನು ಸುತ್ತುವರಿದಿದ್ದ ಇಸ್ರೇಲ್ ಪಡೆಗಳ ಜೊತೆಗಿನ ಗುಂಡಿನ ಚಕಮಕಿಯಲ್ಲಿ ತನ್ನ ಐವರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರ ಗುಂಪು ಹೇಳಿಕೆ ನೀಡಿದೆ.

ಪಶ್ಚಿಮದಂಡೆಯ ಬ್ರೂಖಿನ್‌ ನಲ್ಲಿನ ಇಸ್ರೇಲಿ ವಸಾಹತು ನಿವಾಸಿ ಟಝೀಲಾ ಗೆಝ್ ಎಂಬ ಗರ್ಭಿಣಿಯು ಬುಧವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದು ಆಕೆಯ ಗರ್ಭದಲ್ಲಿದ್ದ ನವಜಾತ ಶಿಶುವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದು ಮಗು ಚೇತರಿಸಿಕೊಳ್ಳುತ್ತಿದೆ. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ. ಈ ಮಧ್ಯೆ, ಬ್ರೂಖಿನ್ ಮತ್ತು ಅಝ್‍ಝವಿಯ ನಗರಗಳನ್ನು ನೆಲಸಮಗೊಳಿಸಬೇಕು ಎಂದು ಇಸ್ರೇಲ್‍ ನ ವಿತ್ತಸಚಿವ ಬೆಜಾಲೆಲ್ ಸ್ಮೊಟ್ರಿಚ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News