ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು `ಕಪ್ಪು ದಿನ'ವಾಗಿ ಆಚರಿಸಲು ಪಿಒಕೆ ಸಂಘಟನೆ ನಿರ್ಧಾರ

Update: 2026-08-11 21:45 IST

Photo Credit : x

ಮುಜಫರಾಬಾದ್, ಆ.11: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಅವಾಮಿ ಆಕ್ಷನ್ ಕಮಿಟಿಯು(ಎಎಸಿ) ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ ಹೊಸ ಹಂತದ ಪ್ರತಿಭಟನೆಗಳನ್ನು ಘೋಷಿಸಿದೆ.

ಆಗಸ್ಟ್ 13ರಂದು ಪಾಕಿಸ್ತಾನ ಸರಕಾರ ಮತ್ತು ಅದರ ಭದ್ರತಾ ಪಡೆಗಳ ವಿರುದ್ಧ ಪ್ರತಿಭಟನೆ ನಿಗದಿಪಡಿಸಲಾಗಿದ್ದರೆ, ಪಾಕಿಸ್ತಾನದ ಸ್ವಾತಂತ್ರ್ಯ ದಿನವಾದ ಆಗಸ್ಟ್ 14ರಂದು ಪಿಒಕೆಯಲ್ಲಿ ನಡೆಯುತ್ತಿರುವ ನಿರಂತರ ದಮನಕಾರಿ ನೀತಿಗಳನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯಲಿವೆ ಎಂದು ಎಎಸಿ ಘೋಷಿಸಿದ್ದು, ವಿದೇಶಗಳಲ್ಲಿರುವ ಕಾಶ್ಮೀರಿ ಸಮುದಾಯದವರು ಪಾಕಿಸ್ತಾನದ ರಾಜತಾಂತ್ರಿಕ ಕಚೇರಿಗಳ ಮುಂಭಾಗದಲ್ಲಿ ಧರಣಿ ಸಂಘಟಿಸುವಂತೆ ವಿನಂತಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News