×
Ad

ರಶ್ಯ: ಕಾರಿನಲ್ಲಿ ಬಾಂಬ್ ಸ್ಫೋಟ; ಸೇನೆಯ ಉನ್ನತ ಕಮಾಂಡರ್ ಮೃತ್ಯು

Update: 2025-04-25 21:40 IST

PC : freepressjournal.in

ಮಾಸ್ಕೋ: ಮಾಸ್ಕೋದಲ್ಲಿ ಶುಕ್ರವಾರ ಕಾರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು ಸೇನೆಯ ಹಿರಿಯ ಕಮಾಂಡರ್ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಮೃತ ಸೇನಾಧಿಕಾರಿಯನ್ನು 59 ವರ್ಷದ ಯರೊಸ್ಲಾವ್ ಮೊಸ್ಕಾಲಿಕ್ ಎಂದು ಗುರುತಿಸಲಾಗಿದೆ. ಮಾಸ್ಕೋ ಹೊರವಲಯದ ಬಲಾಶಿಖಾ ನಗರದಲ್ಲಿ ಸ್ಫೋಟ ಸಂಭವಿಸಿದೆ. ಮೊಸ್ಕಾಲಿಕ್ ಅವರ ಕಾರಿನ ಗ್ಯಾಸ್ ಸಿಲಿಂಡರ್ ಬಳಿ ಸ್ಫೋಟಕವನ್ನು ಇರಿಸಿದ್ದು ಮೊಸ್ಕಾಲಿಕ್ ಕಾರಿನ ಬಾಗಿಲು ತೆಗೆಯುತ್ತಿದ್ದಂತೆಯೇ ದೂರ ನಿಯಂತ್ರಕ ಸಾಧನದ ಮೂಲಕ ಸ್ಫೋಟ ನಡೆಸಲಾಗಿದೆ. ಸ್ಫೋಟದ ತೀವ್ರತೆಗೆ ಮೊಸ್ಕಾಲಿಕ್ ದೇಹ ಹಲವು ಮೀಟರ್ ಗಳಷ್ಟು ದೂರ ಹಾರಿದ್ದು ಕಾರು ಬೆಂಕಿಯಲ್ಲಿ ಸುಟ್ಟು ಹೋಗಿದೆ.

ಸಮೀಪದ ಹಲವು ಕಟ್ಟಡಗಳ ಕಿಟಕಿ ಬಾಗಿಲುಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ `ದಿ ಸನ್' ವರದಿ ಮಾಡಿದೆ. ಮೊಸ್ಕಾಲಿಕ್ ರಶ್ಯ ಸಶಸ್ತ್ರಪಡೆಗಳ ಮುಖ್ಯ ಕಾರ್ಯಾಚರಣೆಗಳ ನಿರ್ದೇಶನಾಲಯದ ಉಪ ಮುಖ್ಯಸ್ಥರಾಗಿದ್ದರು ಮತ್ತು 2015ರಲ್ಲಿ ಉಕ್ರೇನ್ ಜತೆಗಿನ ಸೇನಾಧಿಕಾರಿಗಳ ಮಟ್ಟದ ಸಭೆಯಲ್ಲಿ ರಶ್ಯ ನಿಯೋಗದ ಸದಸ್ಯರಾಗಿದ್ದರು ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News