ಉಕ್ರೇನ್ ನ ಡ್ರೋನ್ ದಾಳಿಯಲ್ಲಿ ಹಲವರು ಮೃತ್ಯು: ರಶ್ಯ ಹೇಳಿಕೆ
Photo : gemini AI
ಮಾಸ್ಕೊ, ನ.13: ಗುರುವಾರ ರಾತ್ರಿ ಉಕ್ರೇನ್ ರಶ್ಯದ ಮೇಲೆ ಸರಣಿ ಡ್ರೋನ್ ದಾಳಿ ನಡೆಸಿದ್ದು, ಸುಮಾರು 1,200 ಉಕ್ರೇನಿಯನ್ ಡ್ರೋನ್ ಗಳನ್ನು ಹೊಡೆದುರುಳಿಸಿರುವುದಾಗಿ ರಶ್ಯ ಹೇಳಿದೆ. ಈ ದಾಳಿಯಲ್ಲಿ ಹಲವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.
ಐದನೇ ವರ್ಷಕ್ಕೆ ಕಾಲಿಡುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ನೇತೃತ್ವದ ಮಾತುಕತೆಗಳಲ್ಲಿ ತೀವ್ರ ರಾಜತಾಂತ್ರಿಕ ಚಟುವಟಿಕೆಗಳು ನಡೆದ ಮರುದಿನವೇ ಈ ದಾಳಿ ನಡೆದಿದೆ. ಈ ಮಧ್ಯೆ, ರಶ್ಯವು ಉಕ್ರೇನ್ ಮೇಲೆ ಸ್ಫೋಟಕ ಡ್ರೋನ್ ಗಳ ದಾಳಿ ನಡೆಸಿದ್ದು, ಒಡೆಸಾ ಮತ್ತು ಝಪೊರಿಝಿಯಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾವು-ನೋವು ಸಂಭವಿಸಿದೆ. ಝಪೊರಿಝಿಯಾದಲ್ಲಿ 17 ವರ್ಷದ ಬಾಲಕ ಮೃತಪಟ್ಟಿದ್ದಾನೆ. ರಶ್ಯದ ದಾಳಿಯಿಂದ ಆಸ್ಪತ್ರೆಯೊಂದಕ್ಕೂ ಹಾನಿಯಾಗಿದ್ದು, ಬೆಂಕಿ ಕಾಣಿಸಿಕೊಂಡಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.