ಇಂಧನ ಗುರಿಗಳ ಮೇಲಿನ ದಾಳಿ ನಿಲ್ಲಿಸಲು ರಶ್ಯ, ಉಕ್ರೇನ್ ಒಪ್ಪಿಗೆ: ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ರಶ್ಯ ಮತ್ತು ಉಕ್ರೇನ್ ಪರಸ್ಪರರ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಲು ಒಪ್ಪಿಕೊಂಡಿವೆ . ಈ ಕ್ರಮವು ಜಾಗತಿಕ ಡೀಸಲ್ ಪೂರೈಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ , ಇಂಧನ ಘಟಕಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ತಡೆಯಲು ರಶ್ಯದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಉಕ್ರೇನ್ ಸಿದ್ಧವಾಗಿದೆ . ಆದರೆ ಯಾವುದೇ ವ್ಯವಸ್ಥೆಯು ನೈಜವಾಗಿರಬೇಕು ಮತ್ತು ದೀರ್ಘಕಾಲದವರೆಗೆ ಮುಂದುವರಿಯಬೇಕು ಎಂದು ಹೇಳಿದ್ದಾರೆ.