Photo Credit : AP 

ವಾಶಿಂಗ್ಟನ್: ಅಮೆರಿಕನ್ನರು ಅಂಚೆ ಮೂಲಕ ಮತ ಚಲಾಯಿಸುವ ವಿಧಾನವನ್ನು ತಡೆಯಲು ಟ್ರಂಪ್ ಆಡಳಿತ ಮಾಡಿದ್ದ ಪ್ರಮುಖ ಪ್ರಯತ್ನಗಳನ್ನು ಅಮೆರಿಕದ ಸುಪ್ರೀಂಕೋರ್ಟ್ ತಡೆಹಿಡಿದಿರುವುದರಿಂದ 2026 ರ ಮಧ್ಯಂತರ ಚುನಾವಣೆಯಲ್ಲಿ ಅಂಚೆ ಮತದಾನವು ಎಂದಿನಂತೆ ಮುಂದುವರಿಯಲಿದೆ.

ಫೆಡರಲ್ ಚುನಾವಣೆಗಳಲ್ಲಿ ಅಂಚೆ ಮತದಾನದ ವಿಧಾನದ ಮೇಲೆ ನಿರ್ಬಂಧಗಳನ್ನು ವಿಧಿಸುವ ಹೊಸ ನಿಯಮಗಳನ್ನು ಅಮೆರಿಕದ ಪೋಸ್ಟಲ್ ಸರ್ವಿಸ್ ಇತ್ತೀಚೆಗೆ ಜಾರಿಗೆ ತಂದಿತ್ತು.

ಅಮೆರಿಕದ ಸಂವಿಧಾನದ ಅಡಿಯಲ್ಲಿ ಚುನಾವಣಾ ನಿಯಮಗಳನ್ನು ಏಕಪಕ್ಷೀಯವಾಗಿ ನಿಯಂತ್ರಿಸಲು ಈ ಕಾರ್ಯನಿರ್ವಾಹಕ ಸಂಸ್ಥೆಗೆ ಯಾವುದೇ ಅಧಿಕಾರವಿಲ್ಲ ಎಂದು ವಾದಿಸಿ ರಾಜ್ಯ ಅಧಿಕಾರಿಗಳು ಮತ್ತು ಮತದಾನದ ಹಕ್ಕುಗಳ ಸಂಸ್ಥೆಗಳು ಈ ನಿಯಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದವು. ಇದೀಗ ಹೊಸ ನಿಯಮಗಳ ಜಾರಿಯನ್ನು ತಡೆಯುವ ಮಧ್ಯಂತರ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor