ಯಮನ್‍ನ ಹುದೈದಾ ಬಂದರಿನ ಮೇಲೆ ಸೌದಿ ಒಕ್ಕೂಟದಿಂದ ದಾಳಿ
Photo Credit : x
ರಿಯಾದ್: ಬುಧವಾರ ಯಮನ್‍ನ ಹುದೈದಾ ಬಂದರಿನಲ್ಲಿರುವ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಹೂತಿಗಳ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟ ತಿಳಿಸಿದೆ.
ಹುದೈದಾದಲ್ಲಿರುವ ನಾಗರಿಕರಿಗೆ ಸ್ಥಳಾಂತರಗೊಳ್ಳುವಂತೆ ಬುಧವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಸೌದಿ ಅರೇಬಿಯಾ ಸೂಚನೆ ನೀಡಿತ್ತು. ಸಾದಾ ಮತ್ತು ಅಮ್ರಾನ್ ಗವರ್ನರೇಟ್‍ಗಳಲ್ಲಿನ ಹಲವಾರು ಇತರ ಗುರಿಗಳನ್ನು ಸಹ ನಾಶಪಡಿಸಲಾಗಿದೆ. ಹೂತಿ ಸೇನಾಪಡೆಯು ನಾಗರಿಕರು ಮತ್ತು ನಾಗರಿಕ ಆಸ್ತಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ನಡೆಸುವ ದಾಳಿಗಳಿಗೆ ದೃಢವಾದ ಪ್ರತ್ಯುತ್ತರ ನೀಡಲಾಗುವುದು ಎಂದು ಒಕ್ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಲಿಕಿ ತಿಳಿಸಿದ್ದಾರೆ.
ಹುದೈದಾ ಬಂದರಿನ ಮೇಲೆ ದಾಳಿ ನಡೆದಿದೆ. ಯಾವುದೇ ಸಾವುನೋವು ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಈ ಪ್ರದೇಶದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಸೌದಿ ಪಡೆಗಳು ದಾಳಿ ನಡೆಸಿವೆ ಎಂದು ಹೂತಿ ಮಾಧ್ಯಮ ಸಂಸ್ಥೆ `ಅಲ್ ಮಸೀರಾ' ವರದಿ ಮಾಡಿದೆ. ಹುದೈದಾ ಬಂದರಿನ ಮೇಲಿನ ದಾಳಿಗೆ ಪ್ರತೀಕಾರವಾಗಿ ಜಿದ್ದಾ ಬಂದರು ಸೇರಿದಂತೆ ಕೆಂಪು ಸಮುದ್ರದ ಕರಾವಳಿಯಲ್ಲಿರುವ ಇತರ ಎಲ್ಲಾ ಸೌದಿ ಬಂದರುಗಳು ನಮ್ಮ ಪಡೆಗಳ ಗುರಿಯಾಗಲಿವೆ ಹೂತಿ ಸೇನಾ ವಕ್ತಾರ ಯಾಹ್ಯಾ ಬುಧವಾರ ಟೆಲಿಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.