ಜೋರ್ಡಾನ್ ಮೇಲೆ ಇರಾನ್‌ನಿಂದ ಸರಣಿ ಕ್ಷಿಪಣಿ ದಾಳಿ

Update: 2026-07-22 21:46 IST

Photo Credit : X 

ದುಬೈ,ಜು.22: ಇರಾನ್ ಬುಧವಾರ ನಡೆಸಿದ ನಾಲ್ಕು ಕ್ಷಿಪಣಿ ದಾಳಿಗಳನ್ನು ತಾನು ತಡೆದಿದ್ದಾಗಿ ಜೋರ್ಡಾನ್ ಸೇನೆ ಬುಧವಾರ ತಿಳಿಸಿದೆ. ಇರಾನ್ ಉಡಾಯಿಸಿದ ಇನ್ನೆರಡು ಕ್ಷಿಪಣಿಗಳು ನಿರ್ಜನ ಪ್ರದೇಶದಲ್ಲಿ ಬಿದ್ದಿರುವುದಾಗಿ ಅದು ಹೇಳಿದೆ. ಜೋರ್ಡಾನ್‌ನ ಅಖಾಬಾದಲ್ಲಿ ಕ್ಷಿಪಣಿ ದಾಳಿಯ ಬಳಿಕ ದಟ್ಟವಾದ ಹೊಗೆ ಹರಡಿರುವ ದೃಶ್ಯಗಳನ್ನು ಗಡಿ ಸಮೀಪದ ಇಸ್ರೇಲಿ ನಗರ ಐಲತ್‌ನಲ್ಲಿ ಸಾರ್ವಜನಿಕರು ಚಿತ್ರೀಕರಿಸಿದ ವೀಡಿಯೊದಲ್ಲಿ ಕಂಡುಬಂದಿದೆ.

ಈ ಮಧ್ಯೆ ಅಮೆರಿಕದ ಸೇನೆ ಬುಧವಾರ ಹೇಳಿಕೆಯೊಂದನ್ನು ನೀಡಿ, ಇರಾನ್ ವಿರುದ್ಧ ಸತತ 11ನೇ ದಿನದ ದಾಳಿಯನ್ನು ಪೂರ್ಣಗೊಳಿಸಿರುವುದಾಗಿ ಅಮೆರಿಕ ಸೇನೆ ತಿಳಿಸಿದೆ. ಅಮೆರಿಕದ ದಾಳಿ ಬೆದರಿಕೆಯ ಹಿನ್ನೆಲೆಯಲ್ಲಿ ರಾಜಧಾನಿ ಟೆಹರಾನ್‌ನಲ್ಲಿ ವಾಯುರಕ್ಷಮಾ ವ್ಯವಸ್ಥೆಯನ್ನು ಇರಾನ್ ಸಕ್ರಿಯೆಗೊಳಿಸಿತ್ತು. ಬುಶಹರ್, ಹಮದಾನ್, ಹೊಮೊಝಗಾನ್, ಖುಝೆಸ್ತಾನ್, ಸಿತ್ತಾನ್ ಪ್ರಾಂತಗಳಲ್ಲಿ ಭಾರೀ ಸ್ಫೋಟಗಳು ಕೇಳಿಬಂದಿರುವುದಾಗಿ ಇರ್ನಾ ಸುದ್ದಿಸಂಸ್ಥೆ ವರದಿ ಮಾಡಿದೆ. ಇರಾನ್ ಸೇನೆಯ ವೈಮಾನಿಕ ಹ್ಯಾಂಗರ್‌ಗಳು ಹಾಗೂ ಡ್ರೋನ್ ದಾಸ್ತಾನು ಘಟಕಗಳ ಮೇಲೆ ದಾಳಿ ನಡೆಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ಇರಾನ್ ಜೊತೆ ಮಾತುಕತೆ ನಡೆಸುವುದಕ್ಕೆ ತನಗೆ ಆಸಕ್ತಿಯಿಲ್ಲವೆಂದು ಹೇಳಿದ್ದಾರೆ. ಅಮೆರಿಕದ ಪಡೆಗಳು ಶೀಘ್ರದಲ್ಲೇ, ಇರಾನ್ ಯುರೇನಿಯಂ ಅನ್ನು ಪುಷ್ಟೀಕರಿಸುವ ಪ್ರಮುಖ ತಾಣಗಳಲ್ಲೊಂದನ್ನು ಶೀಘ್ರದಲ್ಲೇ ಗುರಿಯಿರಿಸಿ ದಾಳಿ ನಡೆಸಲಿವೆಯೆಂದು ಅವರು ಸುಳಿವು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News