ಯೆಮನ್‌ನ ಪಶ್ಚಿಮ ಕರಾವಳಿಯಲ್ಲಿರುವ ಅಲ್-ಮಖಾ ನಗರವನ್ನು ವಶಪಡಿಸಿಕೊಂಡ ಹೌದಿಗಳು; ವರದಿ
Photo credit: aljazeera.com
ಯೆಮನ್: ಹೌದಿಗಳು ಯೆಮನ್‌ನ ಪಶ್ಚಿಮ ಕರಾವಳಿಯಲ್ಲಿರುವ ಬಂದರು ನಗರಿ ಅಲ್- ಮಖಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ಒಂಬತ್ತು ದಿನಗಳಿಂದ ಹೌದಿಗಳು ಮತ್ತು ಯೆಮನ್ ಸರಕಾರಿ ಪಡೆಗಳ ನಡುವೆ ತೀವ್ರ ಹೋರಾಟ ನಡೆಯುತ್ತಿತ್ತು. ತೈಝ್‌ನ ಪಶ್ಚಿಮ ಭಾಗದತ್ತ ಹೌದಿಗಳು ಮುನ್ನುಗ್ಗಲು ಪ್ರಯತ್ನಿಸುತ್ತಿದ್ದರು. ಅಲ್-ಮಖಾ ನಗರ ಮತ್ತು ಕೆಂಪು ಸಮುದ್ರದ ಕರಾವಳಿ ಪ್ರದೇಶವನ್ನು ವಶಪಡಿಸಿಕೊಳ್ಳುವುದು ಅವರ ಮುಖ್ಯ ಗುರಿಯಾಗಿತ್ತು ಎಂದು aljazeera.com ವರದಿ ಮಾಡಿದೆ.
ಅಲ್- ಮಖಾವನ್ನು ವಶಪಡಿಸಿಕೊಂಡಿರುವುದರಿಂದ ಬಾಬ್ ಅಲ್-ಮಂದೆಬ್ ಮೂಲಕ ಹಡಗುಗಳು ಸಂಚರಿಸುವುದನ್ನು ತಡೆಯಲು ಹೌದಿಗಳಿಗೆ ಸಂಪೂರ್ಣ ಅನುಕೂಲ ನೀಡುತ್ತದೆ ಎಂದು ಹೇಳಲಾಗಿದೆ.
ಈ ಪ್ರದೇಶಗಳನ್ನು ಹೌದಿಗಳು ಅಧಿಕೃತವಾಗಿ ವಶಪಡಿಸಿಕೊಂಡಿದ್ದಾರೆ. ಅಲ್-ಮಖಾ ನಗರದ ಸಂಪೂರ್ಣ ನಿಯಂತ್ರಣವನ್ನು ವಹಿಸಿಕೊಂಡಿರುವುದಾಗಿ ಹೌದಿಗಳು ಅಧಿಕೃತವಾಗಿ ಘೋಷಿಸುವುದು ಮಾತ್ರ ಬಾಕಿಯಿದೆ ಎಂದು ವರದಿಯಾಗಿದೆ.
ಅಲ್-ಮಖಾದಲ್ಲಿದ್ದ ಸರಕಾರಿ ಪಡೆಗಳು ತಮ್ಮ ಎಲ್ಲಾ ಸೇನಾ ಘಟಕಗಳನ್ನು ಸಂಪೂರ್ಣವಾಗಿ ಹಿಂಪಡೆದುಕೊಂಡಿವೆ ಎಂದು ಮೂಲಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ. ಪಶ್ಚಿಮ ತೈಝ್‌ನಲ್ಲಿ ಹೌದಿಗಳಿಗೆ ಇದು ನಿರ್ಣಾಯಕ ಗೆಲುವು ಎಂದು ಹೇಳಲಾಗುತ್ತಿದೆ.