ಗಾಝಾದಿಂದ ಯಾರನ್ನೂ ಹೊರಹಾಕುವುದಿಲ್ಲ: ಇಸ್ರೇಲ್
Photo Credit : news.un.org
ಲುಬ್ಲಿಯಾನಾ: ತಮ್ಮ ದೇಶವು ಗಾಝಾ ಪಟ್ಟಿಯಿಂದ ಯಾರನ್ನೂ ಹೊರಹಾಕಲು ಅಥವಾ ಗಡಿಪಾರು ಮಾಡಲು ಯೋಜಿಸುತ್ತಿಲ್ಲ ಎಂದು ಇಸ್ರೇಲ್‍ನ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್ ಬುಧವಾರ ಹೇಳಿದ್ದಾರೆ.
ಸ್ಲೊವೇನಿಯಾದಲ್ಲಿ ಇಸ್ರೇಲಿ ರಾಯಭಾರ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ` ಗಾಝಾದಿಂದ ಯಾರಾದರೂ ತಮ್ಮ ಸ್ವಂತ ಇಷ್ಟದಿಂದ ನಿರ್ಗಮಿಸಲು ಬಯಸಿದರೆ ಮತ್ತು ಅವರನ್ನು ಸ್ವೀಕರಿಸಲು ಯಾವುದೇ ದೇಶ ಸಿದ್ಧವಿದ್ದರೆ, ಪ್ರಪಂಚದ ಯಾವುದೇ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ನಡೆಯುವಂತೆ ನಾವು ಅದನ್ನು ವಿರೋಧಿಸುವುದಿಲ್ಲ" ಎಂದು ತಿಳಿಸಿದರು.
ಯುದ್ಧಪೀಡಿತ ಗಾಝಾದಿಂದ ಎಲ್ಲಾ 20 ಲಕ್ಷ ಜನರನ್ನು ತೆರವುಗೊಳಿಸುವ ಯೋಜನೆಗಳ ಕುರಿತು ಇಸ್ರೇಲಿ ಸಂಪುಟದ ಹಲವಾರು ಸದಸ್ಯರು ನೀಡಿರುವ ಹೇಳಿಕೆಯ ಬಗ್ಗೆ ಅವರು ಪ್ರತಿಕ್ರಿಯಿಸುತ್ತಿದ್ದರು.