×
Ad

ಸಿರಿಯಾ: ಗುಂಡಿನ ದಾಳಿಯಲ್ಲಿ ಮಗು ಸಹಿತ 10 ಮಂದಿ ಮೃತ್ಯು

Update: 2025-02-01 21:09 IST

ಸಾಂದರ್ಭಿಕ ಚಿತ್ರ | Photo credit: PTI

ದಮಾಸ್ಕಸ್: ಮಧ್ಯ ಸಿರಿಯಾದ ಅರ್ಝ ಗ್ರಾಮಕ್ಕೆ ನುಗ್ಗಿದ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಗು, ಮಹಿಳೆ ಸೇರಿದಂತೆ ಕನಿಷ್ಠ 10 ಮಂದಿ ಮೃತಪಟ್ಟಿರುವುದಾಗಿ ಮಾನವ ಹಕ್ಕುಗಳ ಸಿರಿಯಾ ವೀಕ್ಷಣಾಲಯದ ಮೂಲಗಳು ಶನಿವಾರ ಹೇಳಿವೆ.

ಸಿರಿಯಾದ ಪದಚ್ಯುತ ನಾಯಕ ಬಶರ್ ಅಸ್ಸಾದ್ ಅವರ ಅಲವೈಟ್ ಸಮುದಾಯದವರು ಹೆಚ್ಚಿರುವ ಉತ್ತರ ಹಮಾ ಗ್ರಾಮಾಂತರದ ಅರ್ಝಾ ಗ್ರಾಮಕ್ಕೆ ನುಗ್ಗಿದ ಸಶಸ್ತ್ರ ವ್ಯಕ್ತಿಗಳು ಸಾಮೂಹಿಕ ಹತ್ಯಾಕಾಂಡ ಎಸಗಿದ್ದಾರೆ. ಗ್ರಾಮಕ್ಕೆ ನುಗ್ಗಿದ ಬಂದೂಕುಧಾರಿ ವ್ಯಕ್ತಿಗಳು ಮನೆಯ ಬಾಗಿಲು ಬಡಿದಿದ್ದಾರೆ. ಬಾಗಿಲು ತೆಗೆದೊಡನೆ ಗುಂಡು ಹಾರಿಸಿ ಪಲಾಯನ ಮಾಡಿದ್ದಾರೆ. ಮಾಹಿತಿ ತಿಳಿದೊಡನೆ ಸ್ಥಳಕ್ಕೆ ಧಾವಿಸಿರುವ ಭದ್ರತಾ ಪಡೆಗಳು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಮಾನವ ಹಕ್ಕುಗಳ ವೀಕ್ಷಕ ಸಂಸ್ಥೆಯ ಮುಖ್ಯಸ್ಥ ಅಬ್ದೆಲ್ ರಹ್ಮಾನ್‍ರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News