USAನ ECI ನೂತನ ನಿರ್ದೇಶಕರಾಗಿ ಲ್ಯಾನ್ಸ್ ಶ್ರೋಯರ್ ನಾಮನಿರ್ದೇಶನ
Update: 2026-06-28 20:55 IST
ಲ್ಯಾನ್ಸ್ ಶ್ರೋಯರ್ | Photo Credit : X \ @stockbella
ವಾಷಿಂಗ್ಟನ್, ಜೂ.28: ಅಮೆರಿಕ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಸಂಸ್ಥೆಯ ನಿರ್ದೇಶಕರಾಗಿ ಲ್ಯಾನ್ಸ್ ಶ್ರೋಯರ್ ಅವರನ್ನು ನಾಮನಿರ್ದೇಶನ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇದು ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಈ ಹುದ್ದೆಯನ್ನು ಕಾಯಂ ಆಗಿ ಅಲಂಕರಿಸಲಿರುವ ಮೊದಲ ಆಯ್ಕೆಯಾಗಿದೆ.
ಶ್ರೋಯರ್ ಅವರು ಒಕ್ಲಹೋಮ ರಾಜ್ಯದ ಮಾಜಿ ಪೊಲೀಸ್ ಅಧಿಕಾರಿ ಮತ್ತು ನೌಕಾಪಡೆ ಪದಾತಿ ದಳದ ಮಾಜಿ ಅಧಿಕಾರಿಯಾಗಿದ್ದಾರೆ. ಐಸಿಇನ ಹಂಗಾಮಿ ಮುಖ್ಯಸ್ಥರಾಗಿದ್ದ ಟಾಡ್ ಲಿಯಾನ್ಸ್ ಅವರು ಮೇ 31ರಂದು ತಮ್ಮ ಹುದ್ದೆಯನ್ನು ತೊರೆದಿದ್ದು, ಅವರ ಸ್ಥಾನಕ್ಕೆ ಶ್ರೋಯರ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.