×
Ad

ತನ್ನ AI-ರಚಿತ ಚಿತ್ರವನ್ನೇ ಪೋಪ್ ಎಂದು ಪೋಸ್ಟ್ ಮಾಡಿದ ಟ್ರಂಪ್!

Update: 2025-05-03 21:05 IST

ಡೊನಾಲ್ಡ್ ಟ್ರಂಪ್ | PC : @TrumpDailyPosts 

ವಾಷಿಂಗ್ಟನ್: ಪೋಪ್ ಫ್ರಾನ್ಸಿಸ್ ಅವರ ಮರಣದ ಕೇವಲ 11 ದಿನಗಳ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೋಪ್ ರಾಜಲಾಂಛನದಲ್ಲಿ ತಮ್ಮ AI-ರಚಿತ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಟ್ರುತ್ ಸೋಷಿಯಲ್‌ ನಲ್ಲಿ ಪೋಸ್ಟ್ ಮಾಡಲಾದ ಈ ಚಿತ್ರದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಳಿ ಬಟ್ಟೆ ಧರಿಸಿ, ಮೈಟರ್ ಎಂದು ಕರೆಯಲ್ಪಡುವ ಪಾಪಲ್ ಟೋಪಿ ಧರಿಸಿ, ಕುತ್ತಿಗೆಗೆ ದೊಡ್ಡ ಶಿಲುಬೆಯನ್ನು ನೇತುಹಾಕಿರುವುದನ್ನು ತೋರಿಸಲಾಗಿದೆ.

ಪೋಪ್ ಫ್ರಾನ್ಸಿಸ್ ಅವರ ನಂತರ ಯಾರನ್ನು ಉತ್ತರಾಧಿಕಾರಿಯಾಗಲು ಬಯಸುತ್ತಾರೆ ಎಂದು ಕೇಳಿದಾಗ, ಟ್ರಂಪ್ ನಾನೇ ಪೋಪ್ ಆಗಲು ಬಯಸುತ್ತೇನೆ ಎಂದು ತಮಾಷೆ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.

ಇತ್ತೀಚೆಗಷ್ಟೆ ಅವರು, "ನಾನೇ ಪೋಪ್ ಆಗಲು ಬಯಸುತ್ತೇನೆ. ಅದು ನನ್ನ ನಂಬರ್ ಒನ್ ಆಯ್ಕೆಯಾಗಿದೆ", ಎಂದು ಹೇಳಿದ್ದರು.

ಈ ಬಗ್ಗೆ ನನಗೆ ಯಾವುದೇ ಆದ್ಯತೆ ಇಲ್ಲ. ನ್ಯೂಯಾರ್ಕ್‌ನಲ್ಲಿ ಒಬ್ಬರು ತುಂಬಾ ಒಳ್ಳೆಯ ಕಾರ್ಡಿನಲ್ ಇದ್ದಾರೆ ಎಂದು ಟ್ರಂಪ್ ಹೇಳಿದ್ದರು. ಟ್ರಂಪ್ ಹಾಕಿರುವ ಪೋಸ್ಟ್ ಬಗ್ಗೆ ತೀವ್ರ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದ್ದು, ಹಲವರು ಇದನ್ನು ಅಗೌರವ ಎಂದು ಬಣ್ಣಿಸಿದ್ದಾರೆ.

"ದಯವಿಟ್ಟು ಇದನ್ನು ತೆಗೆದುಹಾಕಿ. ನನ್ನನ್ನೂ ಒಳಗೊಂಡಂತೆ ಅನೇಕ ಕ್ಯಾಥೊಲಿಕರು ಇದನ್ನು ನಮ್ಮ ಚರ್ಚ್‌ನ ಹಿಂದಿನ ಮತ್ತು ಮುಂದಿನ ನಾಯಕನಿಗೆ ಮಾಡಿದ ಅಗೌರವ ಎಂದು ಭಾವಿಸುತ್ತಾರೆ", ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

"ಟ್ರಂಪ್, ನಿಮ್ಮ ಪೋಸ್ಟ್ ಕ್ಯಾಥೊಲಿಕ್ ಸಮುದಾಯಕ್ಕೆ ಮಾಡಿದ ಅಗೌರವ ಎಂದು ನಾನು ಭಾವಿಸುತ್ತೇನೆ. ಈ ಅಪಹಾಸ್ಯವು ಅವರ ನಂಬಿಕೆಗಳಿಗೆ ಮಾಡಿದ ಅವಮಾನವಾಗಿದೆ," ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

"ಸಂಪೂರ್ಣವಾಗಿ ಅಗೌರವ. ಕ್ಯಾಥೊಲಿಕ್ ಸಮುದಾಯವು ಶೋಕಿಸುತ್ತಿದೆ ಮತ್ತು ನೀವು ಇದನ್ನು ಪೋಸ್ಟ್ ಮಾಡಿದ್ದೀರಾ?", ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕಳೆದ ವಾರ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ನೀಲಿ ಸೂಟ್ ಧರಿಸಿ ಭಾಗವಹಿಸಿದ್ದಕ್ಕಾಗಿ, ಸಮಾರಂಭದಲ್ಲಿ ಚೂಯಿಂಗ್ ಗಮ್ ಜಗಿಯುತ್ತಿರುವುದು ಕಂಡುಬಂದ ನಂತರ, ಟ್ರಂಪ್ ಅವರು ಆಕ್ರೋಶ ಎದುರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News