×
Ad

ಯಾವುದಾದರೂ ದೇಶ ಅದ್ಭುತ ಪ್ರಸ್ತಾಪ ಮುಂದಿರಿಸಿದರೆ ಸುಂಕ ಕಡಿತಕ್ಕೆ ಸಿದ್ಧ: ಟ್ರಂಪ್ ಘೋಷಣೆ

Update: 2025-04-04 21:22 IST

ಡೊನಾಲ್ಡ್ ಟ್ರಂಪ್ | PC : X 

ವಾಷಿಂಗ್ಟನ್: ಜಾಗತಿಕ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ ಮತ್ತು ಆರ್ಥಿಕ ಹಿಂಜರಿತದ ಭಯವನ್ನು ಹುಟ್ಟುಹಾಕಿದ ಹೊಸ ಸುಂಕಗಳನ್ನು ಘೋಷಿಸಿದ ಸುಮಾರು 24 ಗಂಟೆಗಳ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ʼಯಾವುದಾದರೂ ದೇಶ ಅದ್ಭುತ ಪ್ರಸ್ತಾಪಗಳನ್ನು ಮುಂದಿರಿಸಿದರೆ ಸುಂಕ ಕಡಿತದ ಬಗ್ಗೆ ಮಾತುಕತೆಗೆ ಮುಕ್ತನಾಗಿರುವುದಾಗಿ' ಹೇಳಿದ್ದಾರೆ.

`ಏರ್‍ಫೋರ್ಸ್ ಒನ್'ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು `ಸುಂಕಗಳು ಅಮೆರಿಕವನ್ನು ಮತ್ತೆ ಚಾಲಕನ ಆಸನಕ್ಕೆ ಮರಳಿಸಿದೆ' ಎಂದರು. ಸುಂಕ ಕಡಿತದ ಬಗ್ಗೆ ಪಾಲುದಾರ ದೇಶಗಳೊಂದಿಗೆ ಮಾತುಕತೆ ನಡೆಸುವಿರಾ ಎಂಬ ಪ್ರಶ್ನೆಗೆ ` ಅವರು ನಮಗೆ ವಿಧಿಸುತ್ತಿರುವ ಸುಂಕವನ್ನು ಆಧರಿಸಿ ನಾವು ವಿವಿಧ ಹಂತದ ಸುಂಕ ವಿಧಿಸಿದ್ದೇವೆ. ಇದು ಪರಸ್ಪರ ಸುಂಕ ಪ್ರಕ್ರಿಯೆಯಾಗಿದೆ. ಸುಂಕ ಜಾರಿಗೊಂಡ ಬಳಿಕ ಹಲವು ದೇಶಗಳು ನಮಗೆ ಕರೆ ಮಾಡಿವೆ. ಅದು ನಾವು ಮಾಡಿದ ಜಾದೂ. ಇದೀಗ ನಾವು ಚಾಲಕನ ಆಸನಕ್ಕೆ ಮರಳಿದ್ದೇವೆ. ಕೆಲವು ಅದ್ಭುತಗಳನ್ನು ನೀಡಲು ಸಿದ್ಧವಿರುವುದಾಗಿ ಯಾರಾದರೂ ಹೇಳಿದರೆ ಅದು ಉತ್ತಮ ಪ್ರಸ್ತಾಪ' ಎಂದು ಟ್ರಂಪ್ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News