×
Ad

ಮೆಕ್ಸಿಕೊ: ಇಬ್ಬರು ಮೇಯರ್ ಅಭ್ಯರ್ಥಿಗಳ ಶವ ಪತ್ತೆ

Update: 2024-04-20 22:19 IST

ಮೆಕ್ಸಿಕೊ ಸಿಟಿ : ಮೆಕ್ಸಿಕೊದಲ್ಲಿ ಮೇಯರ್ ಹುದ್ದೆಗೆ ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳು ಶುಕ್ರವಾರ ಒಂದೇ ದಿನ ಶವವಾಗಿ ಪತ್ತೆಯಾಗಿದ್ದಾರೆ. ಇದರೊಂದಿಗೆ, ಜೂನ್ 2ರಂದು ನಡೆಯಲಿರುವ ಅಧ್ಯಕ್ಷೀಯ, ಕಾಂಗ್ರೆಸ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಮೆಕ್ಸಿಕೊದ ವಿವಿಧ ಭಾಗಗಳಲ್ಲಿ ಹತ್ಯೆಗೀಡಾಗಿರುವ ಅಭ್ಯರ್ಥಿಗಳ ಸಂಖ್ಯೆ 17ಕ್ಕೆ ಏರಿದೆ.

ಉತ್ತರದ ರಾಜ್ಯ ಟಮೊಲಿಪಸ್ನ ಸಿಯುಡಾಡ್ ಮಂಟೆ ನಗರದ ಮೇಯರ್ ಆಗಿ ಮರು ಆಯ್ಕೆ ಬಯಸಿರುವ ನೋ ರಾಮೊಸ್ ಫೆರಿಟ್ಝ್ ಶವವಾಗಿ ಪತ್ತೆಯಾಗಿದ್ದಾರೆ. ಅವರನ್ನು ರಸ್ತೆ ಬದಿಯಲ್ಲಿ ಇರಿದು ಕೊಲ್ಲಲಾಗಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಇನ್ನೋರ್ವ ಮೇಯರ್ ಅಭ್ಯರ್ಥಿ ಆಲ್ಬರ್ಟೊ ಗಾರ್ಸಿಯ ನಾಪತ್ತೆಯಾದ ಒಂದು ದಿನದ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ಅವರು ದಕ್ಷಿಣದ ರಾಜ್ಯ ಓಕ್ಸಾಕದ ಸಾನ್ ಜೋಸ್ ಇಂಡಿಪೆಂಡೆನ್ಸಿಯ ನಗರದ ಮೇಯರ್ ಹುದ್ದೆಗೆ ಸ್ಪರ್ಧಿಸಿದ್ದರು.

ಅವರು ತನ್ನ ಪತ್ನಿ ಹಾಗೂ ಸಾನ್ ಜೋಸ್ ಇಂಡಿಪೆಂಡೆನ್ಸಿಯ ಹಾಲಿ ಮೇಯರ್ ಜೊತೆಗೆ ನಾಪತ್ತೆಯಾಗಿದ್ದರು. ಪತ್ನಿ ಜಿವಂತವಾಗಿ ಪತ್ತೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News