ಹಾರ್ಮುಝ್ ನಲ್ಲಿ ಎರಡು ಟ್ಯಾಂಕರ್ ಗಳಿಗೆ ಬೆಂಕಿ: ವರದಿ
Photo Credit : X
ಟೆಹರಾನ್, ನ. 6: ಹಾರ್ಮುಝ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಇರಾನ್ನ ರೆವಲ್ಯುಷನರಿ ಗಾರ್ಡ್ಸ್ (IRGC) ಶುಕ್ರವಾರ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಹಾರ್ಮುಝ್ ಜಲಸಂಧಿಯ ಪೂರ್ವಕ್ಕೆ ಒಂದು ಹಾಗೂ ಜಲಸಂಧಿಯ ಒಳಗೆ ಮತ್ತೊಂದು ಸೇರಿದಂತೆ ನಿಯಮ ಉಲ್ಲಂಘಿಸಿದ ಎರಡು ತೈಲ ಟ್ಯಾಂಕರ್ ಗಳು ಅನಧಿಕೃತ ಮಾರ್ಗದಲ್ಲಿ ಸಾಗಲು ಯತ್ನಿಸಿ ಸಮುದ್ರದಡಿಯ ಸ್ಫೋಟಕಗಳಿಗೆ ಡಿಕ್ಕಿ ಹೊಡೆದಿವೆ. ಈ ಎರಡೂ ಟ್ಯಾಂಕರ್ ಗಳು ತಮ್ಮ ಎಲ್ಲ ಸಂಚಾರ ಮತ್ತು ಗುರುತಿನ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿ, ಅಕ್ರಮ ಹಾಗೂ ಭಯೋತ್ಪಾದಕ ಅಮೆರಿಕನ್ ಸೇನೆಯ ಬೆಂಬಲದೊಂದಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಸಾಗಲು ಯತ್ನಿಸುತ್ತಿದ್ದವು. ಆದರೆ, ಸ್ಫೋಟಕಗಳಿಗೆ ಡಿಕ್ಕಿ ಹೊಡೆದ ನಂತರ ಅವುಗಳಿಗೆ ಬೆಂಕಿ ಹೊತ್ತಿಕೊಂಡು ಸಂಚಾರ ಸ್ಥಗಿತಗೊಂಡಿದೆ ಎಂದು IRGC ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಗುರುವಾರವೂ ಇರಾನ್ ಮಾಧ್ಯಮಗಳು ಹಾರ್ಮುಝ್ ಜಲಸಂಧಿಯಲ್ಲಿ ಇದೇ ರೀತಿಯ ಘಟನೆಗಳಲ್ಲಿ ಐದು ತೈಲ ಟ್ಯಾಂಕರ್ ಗಳು ಮತ್ತು ಒಂದು ಟಗ್ ಬೋಟ್ ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿ ಮಾಡಿದ್ದವು.