Photo Credit : reuters.com

ವಾಶಿಂಗ್ಟನ್, ನ. 6: ವಾಶಿಂಗ್ಟನ್ ಡಿ.ಸಿ.ಯಲ್ಲಿ ಟ್ರಂಪ್ ಪ್ರಸ್ತಾಪಿಸಿದ 250 ಅಡಿ ಎತ್ತರದ 'ಟ್ರಯಂಫಲ್ ಆರ್ಚ್' (ವಿಜಯೋತ್ಸವದ ಕಮಾನು) ನಿರ್ಮಾಣ ಕಾರ್ಯಕ್ಕೆ ಫೆಡರಲ್ ನ್ಯಾಯಾಧೀಶರು 14 ದಿನಗಳ ಕಾಲ ತಡೆ ನೀಡಿದ್ದಾರೆ.

ಗುರುವಾರ ತಡರಾತ್ರಿ ಈ ರಚನೆಗೆ ಅಂತಿಮ ಒಪ್ಪಿಗೆ ನೀಡಲಾಗಿತ್ತು. ಆದರೆ, ಅನುಮೋದನೆ ಸಿಕ್ಕ ಒಂದು ಗಂಟೆಯೊಳಗೆ ಈ ಯೋಜನೆಯ ನಿರ್ಮಾಣ ತಡೆಯುವ ಕುರಿತ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಅಮೆರಿಕದ ಜಿಲ್ಲಾ ನ್ಯಾಯಾಧೀಶೆ ತಾನ್ಯಾ ಚುಟ್ಕನ್, ಪ್ರಸ್ತಾವಿತ ಸ್ಥಳದಲ್ಲಿ ವಿಜಯೋತ್ಸವದ ಕಮಾನು ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ಕಾಮಗಾರಿಗಳನ್ನು ಆಡಳಿತವು ಪ್ರಾರಂಭಿಸುವುದು ಅಥವಾ ಮುಂದುವರಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor