ಮೆಲನಿಯಾ ಟ್ರಂಪ್‌ | Photo Credit : PTI , AP

ಕೀವ್: ರಶ್ಯ ಜೊತೆಗೆ ಉಕ್ರೇನ್ ಭಾಗಶಃ ಕದನವಿರಾಮವನ್ನು ಏರ್ಪಡಿಸುವಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಅವರು ಬುಧವಾರ ರಾಷ್ಟ್ರೀಯ ಪುರಸ್ಕಾರವನ್ನು ಪ್ರದಾನ ಮಾಡಿದ್ದಾರೆ. ‘‘ ಉಕ್ರೇನ್‌ಗೆ ಮಾನವೀಯ ನೆರವು ದೊರೆಯುವಲ್ಲಿ ವೈಯಕ್ತಿಕವಾಗಿ ನೀಡಿದ ಕೊಡುಗೆಗಾಗಿ ಹಾಗೂ ಮಾನವಹಕ್ಕುಗಳು ಮತ್ತು ಸೇವಾ ಕಾರ್ಯಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಕ್ಕಾಗಿ ಈ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದು ಪ್ರಶಸ್ತಿಯ ಪ್ರಶಂಸಾ ಪತ್ರದಲ್ಲಿ ತಿಳಿಸಲಾಗಿದೆ.

ಹಲವಾರು ತಿಂಗಳುಗಳಿಂದ ಔಷಧ ಹಾಗೂ ಆಹಾರದ ತೀವ್ರ ಕೊರತೆಯನ್ನು ಎದುರಿಸುತ್ತಿದ್ದ ಉಕ್ರೇನ್ ಒಲೆಶ್ಕಿ ಪಟ್ಟಣದ ನಿವಾಸಿಗಳು ದಕ್ಷಿಣ ಮುಂಚೂಣಿ ಗಡಿ ಪ್ರದೇಶವನ್ನು ತೊರೆಯಲು ಅವಕಾಶ ಮಾಡಿಕೊಡುವುದಕ್ಕಾಗಿ ಉಕ್ರೇನ್ ಹಾಗೂ ರಶ್ಯ ಪಡೆಗಳ ನಡುವೆ ಸ್ಥಳೀಯ ಕದನವಿರಾಮವನ್ನು ಮೆಲಾನಿಯಾ ಟ್ರಂಪ್ ಕಳೆದ ತಿಂಗಳು ಘೋಷಿಸಿದ್ದರು. ಈ ಕದನ ವಿರಾಮ ಘೋಷಣೆಯು, ಒಲೆಶ್ಕಿ ಪಟ್ಟಣದ ರಸ್ತೆಗಳಲ್ಲಿ ಹುದುಗಿಸಲಾಗಿದ್ದ ನೆಲಬಾಂಬ್‌ಗಳನ್ನು ತೆರವುಗೊಳಿಸಲು ಹಾಗೂ ಸ್ಥಳೀಯ ನಿವಾಸಿಗಳು ಒಂದೊ ಉಕ್ರೇನ್‌ಗೆ ಇಲ್ಲವೇ ರಶ್ಯಕ್ಕೆ ತೆರಳಲು ಅವಕಾಶ ಮಾಡಿಕೊಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor