×
Ad

ಹೌದಿಗಳ ಜತೆ ಸಂಪರ್ಕ ಆರೋಪ: ಇಬ್ಬರು ಭಾರತೀಯರಿಗೆ ಅಮೆರಿಕ ನಿರ್ಬಂಧ

Update: 2024-10-18 20:37 IST

PC : timesofindia.indiatimes.com

ವಾಷಿಂಗ್ಟನ್: ಇರಾನ್‍ನ ತೈಲ ಸಾಗಿಸುವ ಹೌದಿಗಳ ನೆಟ್‍ವರ್ಕ್ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಇಬ್ಬರು ಭಾರತೀಯರಿಗೆ ಅಮೆರಿಕ ನಿರ್ಬಂಧ ವಿಧಿಸಿದೆ.

ತೈಲ ಸಾಗಿಸಿ ಕ್ರೋಢೀಕರಿಸಿದ ಹಣವನ್ನು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಮತ್ತು ಇಸ್ರೇಲ್ ಮೇಲೆ ದಾಳಿ ನಡೆಸಲು ಹೌದಿಗಳು ಬಳಸುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಶಾರ್ಜಾ ಮೂಲದ `ಇಂಡೊ ಗಲ್ಫ್ ಶಿಪ್ ಮ್ಯಾನೇಜ್ಮೆಂಟ್ ಕಂಪೆನಿ'ಯ ಆಡಳಿತ ನಿರ್ದೇಶಕ ರಾಹುಲ್ ರತನ್‍ಲಾಲ್ ಹಾಗೂ ತಾಂತ್ರಿಕ ವ್ಯವಸ್ಥಾಪಕ ದೀಪಾಂಕರ್ ಮೋಹನ್ ಕೆಯೋಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಿರ್ಬಂಧದಡಿ, ಇಬ್ಬರೂ ಅಮೆರಿಕದಲ್ಲಿ ಹೊಂದಿರುವ ಆಸ್ತಿಗಳನ್ನು ಸ್ಥಂಭನಗೊಳಿಸಲಾಗುವುದು. ಇರಾನ್ ಮೂಲದ ಇಸ್ಲಾಮಿಕ್ ರೆವುಲ್ಯುಷನರಿ ಗಾರ್ಡ್ ಕಾಪ್ರ್ಸ್ ನ ಬೆಂಬಲ ಪಡೆದ ಹೌದಿಗಳ ಹಣಕಾಸು ಸಂಸ್ಥೆಯ ಜತೆ ಇವರಿಬ್ಬರು ಸಂಬಂಧ ಹೊಂದಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News