ವೆನೆಝುವೆಲಾದಲ್ಲಿ ಟ್ರಂಪ್ ಕಾರ್ಯಾಚರಣೆ| ಅಮೆರಿಕಾದ ಸಂಸತ್ತಿನಲ್ಲಿ ನಿರ್ಣಯ ಮಂಡಿಸಲು ಸಂಸದರಿಂದ ಸಿದ್ದತೆ
Update: 2026-01-08 20:41 IST
PC: x | AIBSNews24
ವಾಷಿಂಗ್ಟನ್, ಜ.8: ವೆನೆಝುವೆಲಾದಲ್ಲಿ ಟ್ರಂಪ್ ಅವರಿಂದ ಬಲದ ಬಳಕೆಯನ್ನು ಸೀಮಿತಗೊಳಿಸುವ ಉದ್ದೇಶದ ನಿರ್ಣಯವನ್ನು ಅಮೆರಿಕಾದ ಸಂಸತ್ತಿನಲ್ಲಿ ಮಂಡಿಸಲು ಕೆಲವು ಸಂಸದರು ಯೋಜಿಸುತ್ತಿರುವುದಾಗಿ ವರದಿಯಾಗಿದೆ.
ವೆನೆಝುವೆಲಾ ಅಧ್ಯಕ್ಷ ಮಡುರೊ ಮತ್ತವರ ಪತ್ನಿಯನ್ನು ಸೆರೆಹಿಡಿಯುವ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿ ಟ್ರಂಪ್ ಆಡಳಿತವು ಸಂಸತ್ತಿನ ದಾರಿತಪ್ಪಿಸಿದೆ. ಆದ್ದರಿಂದ ಸಂಸತ್ತಿನ ಅನುಮೋದನೆ ಪಡೆಯದೆ ವೆನೆಝುವೆಲಾದಲ್ಲಿ ಮತ್ತೆ ಮಿಲಿಟರಿ ಕಾರ್ಯಾಚರಣೆ ನಡೆಸುವುದರಿಂದ ಅಧ್ಯಕ್ಷ ಟ್ರಂಪ್‍ರನ್ನು ತಡೆಯುವ ಉದ್ದೇಶದ ನಿರ್ಣಯವನ್ನು ಮಂಡಿಸುವುದಾಗಿ ರಿಪಬ್ಲಿಕನ್ ಸಂಸದ ರ್ಯಾಂಡ್ ಪಾಲ್ ಹೇಳಿದ್ದಾರೆ.