Photo Credit : PTI 

ವಾಶಿಂಗ್ಟನ್: ರಾತ್ರಿಯ ವೇಳೆಯಲ್ಲಿ ಪ್ರಯಾಣಿಸುವ ಹಡಗುಗಳ ಮೇಲಿನ ದಾಳಿಯನ್ನು ಇರಾನ್ ತೀವ್ರಗೊಳಿಸಿದ ನಂತರ, ಸೇನಾ ರಕ್ಷಣೆಯ ಭರವಸೆಗಾಗಿ ಹಾರ್ಮುಝ್ ಜಲಸಂಧಿಯ ಮೂಲಕ ಪ್ರಯಾಣಿಸುವ ಟ್ಯಾಂಕರ್‌ಗಳಿಗೆ ನಿರ್ದಿಷ್ಟ ಸಮಯದಲ್ಲಷ್ಟೇ ಸಂಚರಿಸುವಂತೆ ಅಮೆರಿಕ ಕೋರಿದೆ ಎಂದು ಶನಿವಾರ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.

ಜಲಸಂಧಿಯ ದಕ್ಷಿಣ ಭಾಗದಲ್ಲಿರುವ ಒಮಾನ್ ಕರಾವಳಿಯನ್ನು ಹಾದುಹೋಗುವ ಮಾರ್ಗದಲ್ಲಿ ಪ್ರಯಾಣಿಸಲು ಬಯಸುವ ಹಡಗುಗಳಿಗೆ ಅಮೆರಿಕವು ಮೇ ತಿಂಗಳಿನಿಂದ ವಾಯು ಆಧಾರಿತ ರಕ್ಷಣೆಯನ್ನು ನೀಡುತ್ತಿತ್ತು. ಪ್ರಸ್ತುತ ಹಡಗುಗಳಿಗೆ ರಕ್ಷಣೆ ನೀಡುವ ಈ ಅವಧಿಯನ್ನು ದಿನಕ್ಕೆ ಎರಡು ನಿರ್ದಿಷ್ಟ ಸಮಯದ ಸ್ಲಾಟ್‍ಗಳಿಗೆ ಕಡಿತಗೊಳಿಸಲಾಗಿದೆ ಎಂದು ಅಮೆರಿಕದ ನೌಕಾ ಸಮನ್ವಯ ಕೇಂದ್ರದ ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor