ಡೊನಾಲ್ಡ್ ಟ್ರಂಪ್ | Photo Credit : PTI 

ವಾಶಿಂಗ್ಟನ್, ನ.7: ನಾವು ಇರಾನ್ ವಿಷಯದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಸಂಘರ್ಷ ಆರಂಭವಾಗುವುದಕ್ಕೂ ಮುನ್ನ ತೆಗೆಯುತ್ತಿದ್ದಕ್ಕಿಂತ ಹೆಚ್ಚಿನ ತೈಲವನ್ನು ನಾವು ಈಗ ಹೊರತೆಗೆಯುತ್ತಿದ್ದೇವೆ. ಇರಾನ್‌ ನೊಂದಿಗಿನ ಪ್ರಸ್ತುತ ಸಂಘರ್ಷ ಯುದ್ಧವಲ್ಲ. ಕಳೆದ ಐದು ತಿಂಗಳುಗಳಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ, ಕೊಲ್ಲಲ್ಪಟ್ಟಿಲ್ಲ ಅಥವಾ ಯಾವುದೇ ಅನಾಹುತ ನಡೆದಿಲ್ಲ ಎಂದ ಮೇಲೆ ಅದನ್ನು ಯುದ್ಧ ಎನ್ನಲು ಸಾಧ್ಯವಿಲ್ಲ. ಇದು ಯುದ್ಧವಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಪ್ರಾದೇಶಿಕವಾಗಿ ಪ್ರಮುಖ ಕಳವಳಕಾರಿ ವಿಷಯವಾಗಿ ಉಳಿದಿದ್ದು, ತಮ್ಮ ಆಡಳಿತವು ಮಿಲಿಟರಿ ಆಯ್ಕೆಗಳನ್ನು ಚರ್ಚಿಸುತ್ತಿದ್ದರೂ ಈ ಪರಿಸ್ಥಿತಿಯು ಯುದ್ಧಕ್ಕೆ ಸಮಾನವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಇರಾನ್ ನ ಅಣ್ವಸ್ತ್ರ ಆಕಾಂಕ್ಷೆಗಳನ್ನು ತಡೆಯುವಲ್ಲಿ ತಮ್ಮ ಪಾತ್ರದ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಅದನ್ನು ಯಾರೂ ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ. ಇರಾನ್ ಅಣ್ವಸ್ತ್ರ ಅಭಿವೃದ್ಧಿಪಡಿಸುವುದನ್ನು ತಮ್ಮ ಆಡಳಿತ ತಡೆಯದಿದ್ದರೆ, ಇಂದು ಇಸ್ರೇಲ್ ಮತ್ತು ಇಡೀ ಮಧ್ಯಪ್ರಾಚ್ಯವೇ ಅಸ್ತಿತ್ವದಲ್ಲಿರುತ್ತಿರಲಿಲ್ಲ ಎಂದೂ ಟ್ರಂಪ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor