ವಾಡಿ: ವಾಡಿ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಕ್ರೀಡಾಕೂಟದಲ್ಲಿ ಹಲಕರ್ಟಿ ಬಸವೇಶ್ವರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ನಾಲವಾರ ಗ್ರಾಮದಲ್ಲಿ ಗುರುವಾರ ನಡೆದ ಕ್ರೀಡಾಕೂಟದಲ್ಲಿ ಶಾಲೆಯ ಬಾಲಕರ ಖೋ-ಖೋ ಹಾಗೂ ಬಾಲಕಿಯರ ಖೋ-ಖೋ ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ. ಬಾಲಕರ ಹಾಗೂ ಬಾಲಕಿಯರ ವಾಲಿಬಾಲ್ ತಂಡಗಳು ದ್ವಿತೀಯ ಸ್ಥಾನ ಗಳಿಸಿವೆ.

ವೈಯಕ್ತಿಕ ವಿಭಾಗದಲ್ಲಿ ಬಾಲಕಿಯರ 200 ಮೀಟರ್ ಓಟದಲ್ಲಿ ರಂಜಿತಾ ಸಂತೋಷ ದ್ವಿತೀಯ, 600 ಮೀಟರ್ ಓಟದಲ್ಲಿ ಪಾರ್ವತಿ ಮಹಾದೇವ ದ್ವಿತೀಯ ಹಾಗೂ ಬಾಲಕರ 100 ಮೀಟರ್ ಓಟದಲ್ಲಿ ಹನೀಫ್ ಮೈನೋದ್ದಿನ್ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ, ಉಪಾಧ್ಯಕ್ಷ ಭಾಗಣ್ಣ ಬುಕ್ಕಾ, ಕಾರ್ಯದರ್ಶಿ ಶರಣಕುಮಾರ ದೋಶೆಟ್ಟಿ, ಶಿಕ್ಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor