×
Ad

Chitapur | 60 ಕಂಬದ ಗುಡಿಗೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್‌ ಭೇಟಿ

Update: 2026-06-16 18:11 IST

ಚಿತ್ತಾಪುರ : ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರ ಕೂಟರ ಕುಲದೇವತೆ ಎಂದೇ ಖ್ಯಾತಿ ಪಡೆದ ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಭೇಟಿ ನೀಡಿದರು.

ನಂತರ 60 ಕಂಬದ ದೇವಸ್ಥಾನ, ನಂದಿ ಬಾವಿ ಮತ್ತು ಸುತ್ತಲಿನ ದೇವಸ್ಥಾನಗಳಿಗೆ ಹಾಗೂ ಪುರಾತತ್ವ ಇಲಾಖೆಯ ಸ್ಥಳಗಳಿಗೆ ಭೇಟಿ ನೀಡಿದರು. ಪುರಾತತ್ವ ಇಲಾಖೆಯಿಂದ ನಡೆಯುತ್ತಿರುವ ಜಿರ್ಣೋದ್ದಾರ ಕಾಮಗಾರಿಗಳ ನೀಲ ನಕ್ಷೆ ಪರಿಶೀಲನೆ ಮಾಡಿದರು.

ಇದೇ ವೆಳೆ ದೇವಸ್ಥಾನ ಹಾಗೂ 60 ಕಂಬದ ದೇವಸ್ಥಾನ, ನಂದಿ ಬಾವಿಯ ವಿಶೇಷತೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ಕಲಬುರಗಿ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಗ್ರೇಡ್ 2 ತಹಶೀಲ್ದಾ‌ರ್ ರಾಜಕುಮಾ‌ರ್ ಮರತೂರಕ‌ರ್, ಪುರಸಭೆ ಮುಖ್ಯಧಿಕಾರಿ ಭಾರತಿ ದಂಡೋತಿ, ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News