ಸಾಂದರ್ಭಿಕ ಚಿತ್ರ (PTI)

ಕಲಬುರಗಿ: ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕ್ಯಾಂಟ್‌ ಮತ್ತು ಬೀದರ್‌ ನಡುವೆ ನಾಲ್ಕು ವಿಶೇಷ ರೈಲು ಸಂಚಾರಗಳನ್ನು ಆರಂಭಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು–ಬೀದರ್ ವಿಶೇಷ ರೈಲು: ರೈಲು ಸಂಖ್ಯೆ 06589 ಬೆಂಗಳೂರು ಕ್ಯಾಂಟ್‌–ಬೀದರ್‌ ವಿಶೇಷ ರೈಲು ಅಕ್ಟೋಬರ್‌ 9 ಮತ್ತು 16ರಂದು ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 2.15ಕ್ಕೆ ಬೀದರ್‌ ತಲುಪಲಿದೆ.

ಬೀದರ್‌–ಬೆಂಗಳೂರು ವಿಶೇಷ ರೈಲು:

ರೈಲು ಸಂಖ್ಯೆ 06590 ಬೀದರ್‌–ಬೆಂಗಳೂರು ಕ್ಯಾಂಟ್‌ ವಿಶೇಷ ರೈಲು ಅಕ್ಟೋಬರ್‌ 10 ಮತ್ತು 17ರಂದು ಸಂಜೆ 4 ಗಂಟೆಗೆ ಬೀದರ್‌ನಿಂದ ಹೊರಟು, ಮರುದಿನ ಬೆಳಿಗ್ಗೆ 9.45ಕ್ಕೆ ಬೆಂಗಳೂರು ಕ್ಯಾಂಟ್‌ ತಲುಪಲಿದೆ. ಈ ಎರಡೂ ರೈಲುಗಳು ತಲಾ ಎರಡು ಬಾರಿ ಸಂಚರಿಸಲಿವೆ.

ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ:

ಈ ವಿಶೇಷ ರೈಲುಗಳು ಹುಮ್ನಾಬಾದ್‌, ಕಲಬುರಗಿ, ಶಹಾಬಾದ್‌, ವಾಡಿ, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯಂ ರೋಡ್‌, ಆದೋನಿ, ಗುಂತಕಲ್‌, ಅನಂತಪುರ, ಧರ್ಮಾವರಂ, ಹಿಂದೂಪುರ ಹಾಗೂ ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ.

ರೈಲಿನಲ್ಲಿ ಒಂದು ಎಸಿ ದ್ವಿತೀಯ ದರ್ಜೆ, ಮೂರು ಎಸಿ ತೃತೀಯ ದರ್ಜೆ, 10 ಸ್ಲೀಪರ್‌ ಕ್ಲಾಸ್‌, ಮೂರು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ ಎರಡು ಲಗೇಜ್‌ ಕಮ್‌ ಬ್ರೇಕ್‌ ವ್ಯಾನ್‌ಗಳು ಸೇರಿದಂತೆ ಒಟ್ಟು 19 ಐಸಿಎಫ್‌ ಬೋಗಿಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor