ಕಲಬುರಗಿ: ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಬಾಲರಾಜ್ ಅಶೋಕ ಗುತ್ತೇದಾರ ಅವರ ಆದೇಶದ ಮೇರೆಗೆ ಜಿಲ್ಲಾ ಪರಿಶಿಷ್ಟ ವಿಭಾಗದ ಅಧ್ಯಕ್ಷ ಬೈಲಪ್ಪ ಪಟ್ಟೇದಾರ್ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು.

ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲಾದ ಭಾರತದ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಿದ ಐತಿಹಾಸಿಕ ದಿನದ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ್ ಬೀರಬಿಟ್ಟೆ ಅವರು ಸಂವಿಧಾನದ ಪ್ರತಿಜ್ಞೆ ಬೋಧಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡರಾದ ರಾಮಚಂದ್ರ ಅಟ್ಟೂರ್, ಮಲ್ಲಿಕಾರ್ಜುನ ಸಂಗಣಿ, ಮಹಾಂತಪ್ಪ ಮದರಿ, ಬಸವರಾಜ್ ಪಾಟೀಲ್, ದೇವಿಂದ್ರ ಹಸನಾಪುರ, ಹಣಮಂತ ಸನಗುಂದಿ, ಶಿವಲಿಂಗಪ್ಪ ಪಾಟೀಲ್, ಪ್ರವೀಣ್ ಜಾಧವ, ಭೀಮರಾವ್ ಬಂಗಾರಿ, ಸುನಿಲ್ ಗಾಜರೆ, ರಾಜು ಬಡದಾಳ, ಚಂದು ಮೋರೆ, ಯೇಸುನಾಥ್, ನರಸಯ್ಯ ಗುತ್ತೇದಾರ, ಗೋಪಾಲ ಗುತ್ತೇದಾರ, ಮಾರುತಿ ಚವಾಣ್, ಬಾಬರ್ ಮುಸ್ತಫಾ, ಶ್ರೀನಿವಾಸ್ ಜಮಾದಾರ್, ನಾಗಯ್ಯ ಸ್ವಾಮಿ, ಸಂಜು ಮಡಕಿ, ಕಿಶೋರ್ ಕುಮಾರ್, ನಾಗಣ್ಣ ವಾರದ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor