×
Ad

ಕಲಬುರಗಿ | ಜಿಲ್ಲೆಯಾದ್ಯಂತ ʼಸಾಮಾಜಿಕ ಕ್ರೂಢಿಕರಣ ಆಂದೋಲನʼ : ಭಂವರ್ ಸಿಂಗ್ ಮೀನಾ

Update: 2026-03-10 20:49 IST

ಕಲಬುರಗಿ: ಕಲಬುರಗಿ ಜಿಲ್ಲಾ ಪಂಚಾಯತ್ ಹಾಗೂ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಇದೇ ಮಾರ್ಚ್ 11ರಿಂದ 31 ರವರೆಗೆ ಸಾಮಾಜಿಕ ಕ್ರೂಢೀಕರಣ ಆಂದೋಲನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮೀಣ ಭಾಗದ ಪ್ರತಿ ಕುಟುಂಬದ ಒಬ್ಬ ಮಹಿಳೆ ಸ್ವ-ಸಹಾಯ ಗುಂಪುಗಳಲ್ಲಿ ಸೇರ್ಪಡೆಯಾಗುವುದು ಆಂದೋಲನದ ಮುಖ್ಯ ಉದ್ದೇಶವಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ ಸಾಲಿಗೆ ಹೊಸದಾಗಿ 87,696 ಕುಟುಂಬಗಳನ್ನು ಸಂಜೀವಿನಿ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ವ್ಯಾಪ್ತಿಗೆ ಸೇರ್ಪಡಿಸುವ ಗುರಿ ಹೊಂದಲಾಗಿದೆ.

ಆದ್ದರಿಂದ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅನುಷ್ಠಾನವಾಗುತ್ತಿರುವ ಗೃಹಲಕ್ಷಿ ಯೋಜನೆ ಫಲಾನುಭವಿಗಳು, ಮಾಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಹಿಳಾ ಕಾರ್ಮಿಕರು, (ವಿಬಿಜಿ ರಾಮ್-ಜಿ), ಪ್ರಧಾನ ಮಂತ್ರಿ ಆವಾಸ್ ಮಹಿಳಾ ಗ್ರಾಮೀಣ ಫಲಾನುಭವಿಗಳು (ಪಿಎಂಎವೈ-ಜಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ, ದುರ್ಬಲ ವರ್ಗದ ಮಹಿಳೆಯರು, ವಿಶೇಷ ಚೇತನರು, ಹಿರಿಯ ನಾಗರಿಕರು, ತೃತೀಯ ಲಿಂಗದವರು ಸೇರಿದಂತೆ, ಹೊಸ ಸ್ವ-ಸಹಾಯ ಸಂಘ ರಚಿಸಲು ಅವಕಾಶವಿದ್ದು. ಪ್ರತಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವ್ಯಾಪ್ತಿಯ ಎಂಬಿಕೆ,(ಪ್ರಧಾನ ಪುಸ್ತಕ ಬರಹಗಾರರು) ಎಲ್‌ಸಿಆರ್‌ಪಿ (ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿ) ಗಳಿಗೆ ಸಂರ್ಪಕಿಸಲು ತಿಳಿಸಿದೆ.

ಅದರಂತೆ ಈಗಾಗಲೇ ವಿವಿಧ ಇಲಾಖೆ, ಎನ್‌ಜಿಓ ರವರ ಮೂಲಕ ರಚಿಸಿದ ಸ್ವ-ಸಹಾಯ ಸಂಘಗಳು ಸೇರ್ಪಡೆಯಾಗಲು ಅವಕಾಶವಿದೆ. ಅದರಂತೆ ಯೋಜನೆಯಡಿ ನೀಡುವ ಸಮುದಾಯ ಬಂಡವಾಳ ನಿಧಿ, ಸುತ್ತುನಿಧಿ, ವಿಆರ್‌ಎಫ್ ನಿಧಿ, ಪಿಎಂಎಫ್‌ಎಂಇ ಮತ್ತು ಕೃಷಿ ಹಾಗೂ ಕೃಷಿಯೇತರ ಜೀವನೋಪಾಯ ಚಟುವಟಿಕೆಗಳ ಬಗ್ಗೆ ತರಬೇತಿ, ಮಾರ್ಗದರ್ಶನ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲಭ್ಯವನ್ನು ಪಡೆಯುವಲ್ಲಿ ಮೊದಲ ಆದ್ಯತೆ ಮೇಲೆ ಅವಕಾಶ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News