ಕಲಬುರಗಿ| ಕಾರು- ಜೀಪ್ ಮಧ್ಯೆ ಭೀಕರ ಅಪಘಾತ; ಓರ್ವ ಮೃತ್ಯು, 6 ಜನರಿಗೆ ಗಾಯ
Update: 2025-12-12 20:17 IST
ಕಲಬುರಗಿ: ಕಾರು ಮತ್ತು ಜೀಪ್ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಚಿತ್ತಾಪುರ ತಾಲೂಕಿನ ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಹರಳಯ್ಯ ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದವರು ಸೇಡಂನಿಂದ ಕಲಬುರಗಿಗೆ ತೆರಳುತ್ತಿದ್ದರು. ಜೀಪ್‌ನಲ್ಲಿದ್ದವರು ಕಲಬುರಗಿಯಿಂದ ಮಳಖೇಡ್‌ಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮಾಡಬೂಳ ಪಿಎಸ್‌ಐಗಳಾದ ಗೌತಮ್, ಸಿದ್ಧಲಿಂಗ, ಪಿ.ಎಸ್ ವನಂಜಕರ್, ಸಿಬ್ಬಂದಿ ವೀರಶೆಟ್ಟಿ, ಪ್ರೇಮ್, ಕೊಟ್ರೇಶ, ಚಂದ್ರಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.