ಕಲಬುರಗಿ | ದೇಶದ ಮೂಲ ನಿವಾಸಿಗಳು ಬೌದ್ಧರು : ನಿಂಗಪ್ಪ ಪ್ರಭುದಕರ್
ಕಲಬುರಗಿ, ಡಿ.22: ಭಾರತ ದೇಶದ ಮೂಲ ನಿವಾಸಿಗಳು ಬೌದ್ಧರು. ನಮ್ಮ ಧರ್ಮದ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಕಾಂಗ್ರೆಸ್ ಮುಖಂಡ ನಿಂಗಪ್ಪ ಪ್ರಭುದಕರ್ ಹೇಳಿದರು.
ಕಮಲಾಪುರದಲ್ಲಿರುವ ಭೀಮನಗರದಲ್ಲಿ ರಂಗ ವೃಕ್ಷ ನಾಟಕ ನೃತ್ಯ ಸೇವಾ ಸಂಘ ವತಿಯಿಂದ 69ನೇ ಧಮ್ಮಚಕ್ರ ಪ್ರವರ್ತನ ದಿನದ ಪ್ರಯುಕ್ತ ಆಯೋಜಿಸಿದ್ದ ಬಹಿರಂಗ ಸಭೆ ಹಾಗೂ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.
ಸಮಾಜದಲ್ಲಿರುವ ಮೂಢನಂಬಿಕೆ, ಅಂಧ ಶ್ರದ್ದೆ, ಮತ್ತಿತ್ತರ ಮೌಢ್ಯಾಚರಣೆಗಳಿಂದ ದೂರವಿರಬೇಕು, ಬುದ್ಧನ ತತ್ವಗಳನ್ನ ನಾವೆಲ್ಲರೂ ಪಾಲಿಸಬೇಕು. ನಮ್ಮ ನಡೆ ಬುದ್ಧನ ಕಡೆಗೆ, ಅಂದರೆ ಅಜ್ಞಾನದಿಂದ ಜ್ಞಾನದ ಕಡೆಗೆ ಎಲ್ಲ ಸಮಾಜದವರು ಮುಖ ಮಾಡಬೇಕು ಎಂದರು.
ಸಮಾಜದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು, ದ್ವೇಷ, ಅಸೂಯೆ ಪಡಬಾರದು. ಬಾಬಾಸಾಹೇಬರು ಕಂಡಂತಹ ಕನಸು ನನಸು ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶರಣು ಗೌರೆ, ಹರೀಶ್ ಪಟ್ನಾಯಕ್, ಫತ್ರುಬಿ ವಕೀಲರು, ರವೀಂದ್ರ. ಬಿಕೆ, ರಂಗ ನಿರ್ದೇಶಕ ಮಲ್ಲಿಕಾರ್ಜುನ್ ದೊಡ್ಮನಿ ಸೇರಿ ಮುಖಂಡರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.