ಆಳಂದ | ಗುತ್ತೇದಾರ ಸ್ಮಾರಕ ಪ್ರೌಢಶಾಲೆಯ ರಜತ ಮಹೋತ್ಸವ ಆಚರಣೆ
ಕಲಬುರಗಿ(ಆಳಂದ): ಆಳಂದ ಪಟ್ಟಣದಲ್ಲಿರುವ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಭೀಮಬಾಯಿ ಹಣಮಯ್ಯ ಗುತ್ತೇದಾರ ಸ್ಮಾರಕ ಪ್ರೌಢಶಾಲೆಯ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳ ಆಯೋಜನೆಯಲ್ಲಿ ಶಾಲೆಯ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ರವಿವಾರ ನೆರವೇರಿತು.
ಶಾಲೆಯ ಕಾರ್ಯದರ್ಶಿ ಹರ್ಷಾ ಗುತ್ತೇದಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, "ನಮ್ಮ ಶಾಲೆಯ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. ಈ ರಜತ ಮಹೋತ್ಸವವು ಕೇವಲ ಒಂದು ಆಚರಣೆಯಲ್ಲ, ನಮ್ಮ ಶಾಲೆಯ ಶಿಕ್ಷಣ ಗುಣಮಟ್ಟ ಮತ್ತು ಗುರು-ಶಿಷ್ಯರ ಸಂಬಂಧದ ಗಾಢತೆಯನ್ನು ತೋರಿಸುವ ಸಂಭ್ರಮದ ಕ್ಷಣ" ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಡಳಿತಾಧಿಕಾರಿ ಹಣಮಂತ ಶೇರಿ ಅವರು, "2000ನೇ ಸಾಲಿನಲ್ಲಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಇಲ್ಲಿ ಸೇರಿರುವುದು ಶಾಲೆಯ ಯಶಸ್ಸಿನ ನಿಜವಾದ ಸಾಕ್ಷಿ. ಈ ಶಾಲೆಯು ಕೇವಲ ಶಿಕ್ಷಣ ನೀಡಿದ್ದಲ್ಲ, ಜೀವನದ ಮೌಲ್ಯಗಳನ್ನೂ ನೀಡಿದೆ" ಎಂದು ಹೇಳಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ ಅವರು ಮಾತನಾಡಿದರು.
ಪಿಯು ಪ್ರಾಚಾರ್ಯ ಡಾ.ಅಪ್ಪಾಸಾಬ ಬಿರಾದಾರ, ಎಂಪಿಎಜಿ ಪಿಯು ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ ಮತ್ತು ಎಂಬಿಎಚ್‌ಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಲ್ಲಿನಾಥ ತುಕ್ಕಾಣೆ ಅವರು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮದ ಸಂಯೋಜಕರಾದ ಕಲಬುರಗಿಯ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಾರಾಮ ವಾಡೇದ ಅವರು ಮಾತನಾಡಿದರು.
ಸುರೇಶ ತೋಳೆ, ಶರಣು ಅಚಲೇರಿ, ರಾಜೇಂದ್ರ ಬಾವಿ, ಸಿದ್ಧರಾಮ ದೋತ್ರೆ, ವಿಜಯಲಕ್ಷ್ಮಿ ಬಿರಾದಾರ, ಸೈಯದ್ ಅಬಿದಲಿ, ರಾಜೇಂದ್ರ ಬೋಳಶೆಟ್ಟಿ, ಸಂತೋಷ ವೇದಪಾಠಕ, ಸಂತೋಷ ಕಾಮಣೆ, ಸಂಜಯ ಮೋರೆ, ಸುಭಾಷ ಮೈಂದರಗಿ, ಗುಂಡೇರಾವ್ ಪಾಟೀಲ ಕವಲಗಾ, ಇಶಾಕ್ ಅಲಿ, ಶಿವಾನಂದ ಚಿಲಾಮಣಿ ಸೇರಿದಂತೆ ಅನೇಕ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗೌರವಾನ್ವಿತ ಅತಿಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಸಂಗೀತ, ನೃತ್ಯ, ನಾಟಕ ಮತ್ತು ಗುರುಗಳಿಗೆ ಸ್ಮರಣಾರ್ಥ ಸಮರ್ಪಣೆಗಳು ನಡೆದವು. ಕಾಶಿನಾಥ ಹಿರೇಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪವನ ಹಿರೇಮಠ ಸ್ವಾಗತಿಸಿದರು. ಅನೀತಾ ಹತ್ತರಕಿ ಅವರು ವಂದಿಸಿದರು.