×
Ad

ಕಲಬುರಗಿ | ಭೀಮ್ ಆರ್ಮಿಯ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ

Update: 2025-12-21 23:19 IST

ಕಲಬುರಗಿ: ಭೀಮ್ ಆರ್ಮಿ ಭಾರತ್ ಎಕ್ತಾ ಮಿಷನ್ ಸಂಘಟನೆಯ ರಾಜ್ಯಾಧ್ಯಕ್ಷರಾದ ಎಸ್.ಎಸ್.ತಾವಡೆ ಅವರ ನೇತೃತ್ವದಲ್ಲಿ ಭೀಮ್ ಆರ್ಮಿ ಭಾರತ್ ಎಕ್ತಾ ಮಿಷನ್ ಸಂಘಟನೆಯ ಕಲ್ಯಾಣ ಕರ್ನಾಟಕ ಮಹಿಳಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕಲ್ಯಾಣ ಕರ್ನಾಟಕ ಮಹಿಳಾ ಘಟಕದ ವಿಭಾಗ ಅಧ್ಯಕ್ಷರಾಗಿ ಸೋನುಬಾಯಿ ಆರ್ ಸಿಂಗೇರಿ ಹಾಗೂ ವಿಭಾಗೀಯ ಕಾರ್ಯದರ್ಶಿಯಾಗಿ ಶಿಲ್ಪಾ ನಾಗೂರೆ ಅವರನ್ನು ಆಯ್ಕೆ ಮಾಡಲಾಯಿತು.

ಬಳಿಕ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಆವರಣದಲ್ಲಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನ ಕಾರ್ಯದರ್ಶಿ ರಾಯಪ್ಪ ಬುಳ್ಳ, ರಾಜ್ಯ ಕಾರ್ಯದರ್ಶಿ ಸುರೇಶ ಗಂಗಾರೆ ಬೀದರ್, ಭೀಮ್ ಆರ್ಮಿ ಚಿತ್ತಾಪುರ ತಾಲೂಕು ಅಧ್ಯಕ್ಷ ನಾಗರಾಜ ಗಾಯಕವಾಡ, ರಾಹುಲ್ ಸಿಂಗೆ, ಜಿಲ್ಲಾ ಖಜಾಂಚಿ ತಿಪ್ಪಣ್ಣ ಬಿರಾದಾರ್ ಹಾಗೂ ರಾಜೇಶ್ವರಿ ಸುಗಂಧಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News