×
Ad

ಆಳಂದ | ಕೃಷಿ ಇಲಾಖೆಯಿಂದ ರಾಶಿ ಯಂತ್ರ ವಿತರಣೆ

Update: 2025-12-21 23:27 IST

ಕಲಬುರಗಿ(ಆಳಂದ): ಆಳಂದ ಪಟ್ಟಣದ ಶಾಸಕರ ಸಂಪರ್ಕ ಕಚೇರಿಯಲ್ಲಿ ರವಿವಾರ ಕೃಷಿ ಇಲಾಖೆಯ ಆಶ್ರಯದಲ್ಲಿ ಸಹಾಯಧನದ ಪಡೆದ ಇಬ್ಬರು ಫಲಾನುಭವಿಗಳಿಗೆ ರಾಶಿ ಯಂತ್ರವನ್ನು ವಿತರಣೆ ಮಾಡಲಾಯಿತು.

ಫಲಾನುಭವಿಗಳಿಗೆ ಯಂತ್ರದ ಕೀ ವಿತರಿಸಿ ಮಾತನಾಡಿದ ಕರ್ನಾಟಕ ರಾಜ್ಯ ನೀತಿ ಹಾಗೂ ಯೋಜನಾ ಆಯೋಗ ಉಪಾಧ್ಯಕ್ಷ, ಶಾಸಕ ಬಿ.ಆರ್.ಪಾಟೀಲ್ ಅವರು, ದುಬಾರಿ ಹಣ ಪಡೆಯದೆ ರೈತ ಸ್ನೇಹಿಯಾಗಿ ಸೇವೆ ಮಾಡುವಂತೆ ಸಲಹೆ ನೀಡಿದರು.

ಆಳಂದ ತಾಲೂಕಿನಲ್ಲಿ ಬೇರೆ ರಾಜ್ಯಗಳಿಂದಲೂ ಯಂತ್ರಗಳು ತಂದು ರೈತರಿಂದ ಹೆಚ್ಚಿನ ಹಣ ಪಡೆದು ತೊಗರಿ, ಸೊಯಾಬಿನ್, ಹೆಸರು, ಉದ್ದಿನ, ಜೋಳದ ರಾಶಿ ಮಾಡುತ್ತಿರುವದನ್ನು ಮನಗಂಡು ಕೃಷಿ ಇಲಾಖೆಯ 2025-26 ನೇ ಸಾಲಿನ ಹೈಟೆಕ್ ಹಾರ್ವೇಸ್ಟರ್‌ ಹಬ್ಬ ಯೋಜನೆಯಡಿ ಇಬ್ಬರು ಫಲಾನುಭವಿಗಳಿಗೆ ಸಹಾಯಧನಲ್ಲಿ ವಿತರಣೆ ಮಾಡಿದ್ದು ಇದರ ಲಾಭವನ್ನು ತಾಲೂಕಿನ ರೈತರು ಪಡೆದುಕೊಳ್ಳಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಬನಸಿದ್ದ ಬಿರಾದಾರ ಮಾತನಾಡಿ, ಇಲಾಖೆಯ ಕುರಿತು ವಿವಿಧ ಮಾಹಿತಿ ನೀಡಿದರು.

ಮಾದನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಪಾಟೀಲ್, ಕಲಬುರಗಿ-ಬೀದರ್‌-ಯಾದಗಿರಿ ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್, ಕೃಷಿ ಅಧಿಕಾರಿ ಸರೋಜಿನಿ ಎಚ್.ಗೋವಿನ, ಶ್ರೀಮಂತ ವಾಗಧರಗಿ, ವಿಶ್ವನಾಥ ವಠಾರ, ಶರಣಬಸಪ್ಪ ವಾಗೆ, ಆನಂದ ದೇಶಮುಖ, ಹಜರತ್ ಪಟೇಲ್, ಬಸಲಿಂಗಪ್ಪ ಗಾಯಕವಾಡ, ಮಲ್ಲಿನಾಥ ಅಮರೆ, ಚಿದಾನಂದ ನಾಗಣಸೂರೆ, ಚನ್ನವೀರ ಕಾಳಕಿಂಗೆ, ರಾಮ ಹತ್ತರಕಿ, ಶ್ರವಣ ಆಳಂಗೆ, ಸೂರ್ಯಕಾಂತ ಧಾಬಾ, ಯೋಗೇಶ ಸಕ್ಕರಗಿ , ಫಲಾನುಭವಿ ಅವಿನಾಶ ರಾಠೋಡ, ಮಹೇಶ ಬಿರಾದಾರ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News