Kalaburagi | ಡಾ.ಶರಣಪ್ರಕಾಶ್ ಪಾಟೀಲ್ ಅವರಿಗೆ ಮಹಾಂತಪ್ಪ ಸಂಗಾವಿ ಅಭಿನಂದನೆ
Update: 2026-06-05 19:39 IST
ಕಲಬುರಗಿ: ಕರ್ನಾಟಕ ಸರ್ಕಾರದಲ್ಲಿ ಮೂರನೇ ಬಾರಿಗೆ ಸಚಿವ ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಡಾ.ಶರಣಪ್ರಕಾಶ್ ಪಾಟೀಲ್ ಅವರಿಗೆ ಮಾಜಿ ಕಾಡಾ ಅಧ್ಯಕ್ಷರು ಹಾಗೂ ಕೆಪಿಸಿಸಿ ಸದಸ್ಯರಾದ ಮಹಾಂತಪ್ಪ ಸಂಗಾವಿ ಅವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವರ ನಿವಾಸಕ್ಕೆ ಭೇಟಿ ನೀಡಿದ ಮಹಾಂತಪ್ಪ ಸಂಗಾವಿ ಅವರು, ಪುಷ್ಪಗುಚ್ಛ ನೀಡಿ ಶುಭ ಹಾರೈಸಿ, ಸಚಿವರಾಗಿ ಮತ್ತೊಮ್ಮೆ ರಾಜ್ಯದ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಚಂದ್ರಕೀರ್ತಿ ಸಂಗಾವಿ, ಶ್ರೀನಿವಾಸ್ ಸಂಗಾವಿ ಹಾಗೂ ರಾಜು ಸಂಗಾವಿ ಉಪಸ್ಥಿತರಿದ್ದು, ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿದರು.