×
Ad

ಕಲಬುರಗಿ | ಆಸ್ತಿಗಾಗಿ ಸಂಬಂಧಿಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

Update: 2026-06-14 18:26 IST

ಶಹಾಬಾದ್; ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಕನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಶಹಾಬಾದ್'ನ ಮರಗೋಳ ಕಾಲೇಜು ಬಳಿಯ ಬೀರಲಿಂಗೇಶ್ವರ ದೇವಸ್ಥಾನ ಮಹಾದ್ವಾರದ ಮುಂದೆ ಶುಕ್ರವಾರ ಸಂಜೆ ನಡೆದಿದೆ.

ನಾಗರಾಜ (40) ಕೊಲೆಯಾದವರು. ತಿರುಪತಿ ದೇವಕರ ಕೊಲೆ ಆರೋಪಿ.

ತಿರುಪತಿ, ತನ್ನ ಸೋದರತ್ತೆಯ ಆಸ್ತಿಗಾಗಿ ಜೇವರ್ಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದ. ಆದರೆ, ಇದಕ್ಕೆ ಅತ್ತೆಯ ಮಗ ನಾಗರಾಜ ಅಡ್ಡಿಯಾಗಿದ್ದ. ಇದರಿಂದ ಆಕ್ರೋಶಗೊಂಡಿದ್ದ ತಿರುಪತಿ ನಾಗರಾಜನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಕಲಬುರಗಿ ಎಎಸ್‌ಪಿ ಮಹೇಶ ಮೇಘಣ್ಣನವರ, ಡಿವೈಎಸ್‌ಪಿ ಶಂಕರಗೌಡ ಪಾಟೀಲ್‌, ಸಿಪಿಐ ಪಿ.ಎಸ್.ವನಂಜಕರ, ಪಿಎಸ್‌ಐ ಚಂದ್ರಕಾಂತ ಮೆಕಾಲೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಕೊಲೆ ಬಳಿಕ ಆರೋಪಿ ತಿರುಪತಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News