×
Ad

ಕರಾಟೆ ಕ್ಯಾಂಪ್: ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್, ಕಲರ್ ಬೆಲ್ಟ್ ಪ್ರಮಾಣಪತ್ರ ವಿತರಣೆ

Update: 2026-06-14 20:49 IST

ಕಲಬುರಗಿ : ಆಳಂದ್ ಚೆಕ್‌ಪೋಸ್ಟ್ ಸಮೀಪದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಕಲ್ರಿ-ಎನ್-ರಿಯು ಅಕಾಡೆಮಿ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯಕುಮಾರ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ವಾರ್ಷಿಕ ತರಬೇತಿ ಶಿಬಿರ (ಅನ್ನುವಲ್ ಟ್ರೈನಿಂಗ್ ಕ್ಯಾಂಪ್), ಬ್ಲಾಕ್ ಬೆಲ್ಟ್ ಹಾಗೂ ಕಲರ್ ಬೆಲ್ಟ್ ಪರೀಕ್ಷೆಯನ್ನು ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಆಗಮಿಸಿದ್ದ ರೆಡ್ ಬೆಲ್ಟ್ ಗ್ರಾಂಡ್ ಮಾಸ್ಟರ್ ಶ್ರೀನಿವಾಸ್ ಅವರು ವಿದ್ಯಾರ್ಥಿಗಳ ಕರಾಟೆ ಕೌಶಲ್ಯ ಮತ್ತು ಪರೀಕ್ಷೆಯನ್ನು ವೀಕ್ಷಿಸಿ, ಅರ್ಹರಾದ ನಾಲ್ಕು ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಪ್ರದಾನ ಮಾಡಿದರು. ಅಲ್ಲದೇ ಅನೇಕ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ಹಾಗೂ ತರಬೇತಿ ಶಿಬಿರದ ಪ್ರಮಾಣಪತ್ರಗಳನ್ನು ವಿತರಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ (ಸೈಬರ್ ಕ್ರೈಂ) ಬಸವರಾಜ್ ಮಂಜಳಕರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕರಾಟೆಯಂತಹ ಶಿಸ್ತುಬದ್ಧ ಕ್ರೀಡೆಗಳು ಆತ್ಮವಿಶ್ವಾಸ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ದೃಢತೆಯನ್ನು ಬೆಳೆಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಕೋಚ್ ರಾಜವರ್ಧನ್ ಜಿ. ಚೌಹಾಣ್, ದಾದಾಸಾಹೇಬ್, ಶ್ರೀಕಾಂತ್ ಪಿಸಾಳ್, ಪ್ರತಾಪ್ ಸಿಂಗ್ ಪವಾರ್, ಅಂಬರೀಶ್ ಎನ್., ಅನಿಲಕುಮಾರ್, ತುಲಜಮ್ಮ ಕಟ್ಟಿಮನಿ ಸೇರಿದಂತೆ ಪಾಲಕರು, ಪೋಷಕರು ಹಾಗೂ ಕರಾಟೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಬಿರದಲ್ಲಿ ವಿದ್ಯಾರ್ಥಿಗಳು ವಿವಿಧ ಕರಾಟೆ ಕೌಶಲ್ಯಗಳ ಪ್ರದರ್ಶನ ನೀಡಿದ್ದು, ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News