Kalaburagi | ಗುಲ್ಬರ್ಗಾ ವಿವಿ ಶಿಕ್ಷಕೇತರ ನೌಕರರ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ಒಕ್ಕೂಟದ ಸರ್ವಸಾಮಾನ್ಯ ಸಭೆಯಲ್ಲಿ 2026ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ರಿಷಿಕುಮಾರ ಎಂ. ಹೊರಕೇರಿ ಅವರ ನೇತೃತ್ವದಲ್ಲಿ ಅ.1ರಂದು ನಡೆದ ಸಭೆಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಪದಾಧಿಕಾರಿಗಳಾಗಿ ಪ್ರಕಾಶ ಎಂ. ಹದನೂರಕರ ಅವರನ್ನು ಗೌರವಾಧ್ಯಕ್ಷರಾಗಿ, ಬಿ.ಎಂ. ರುದ್ರವಾಡಿ ಅವರನ್ನು ಅಧ್ಯಕ್ಷರಾಗಿ, ಸುವರ್ಣಾ ವಿ. ಅವರನ್ನು ಉಪಾಧ್ಯಕ್ಷರಾಗಿ, ಅಮೃತ ಎಂ. ಜವಳಕರ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಡಾ. ವಿದ್ಯಾಧರ ಮೇಲಕೇರಿ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಹಾಗೂ ಸಂಗಣ್ಣ ಮಹಾದೇವಪ್ಪ ಅವರನ್ನು ಕೋಶಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿಣಿ ಸದಸ್ಯರಾಗಿ ರಿಷಿಕುಮಾರ ಎಂ. ಹೊರಕೇರಿ, ಸಿದ್ಧರಾಮೇಶ್ವರ ಸಿ.ಪಿ., ಪ್ರದೀಪಕುಮಾರ ಮಾಮನಿ, ಅಶೋಕ ನಾಗಪ್ಪ ಹಾಗೂ ಮಲ್ಲಿಕಾರ್ಜುನ ಬೆಣ್ಣೂರ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಒಕ್ಕೂಟದ ಆಶಯಗಳಿಗೆ ಅನುಗುಣವಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ, ಶಿಕ್ಷಕೇತರ ನೌಕರರ ಹಿತಾಸಕ್ತಿಗಳ ರಕ್ಷಣೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ನೂತನ ಅಧ್ಯಕ್ಷ ಬಿ.ಎಂ. ರುದ್ರವಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ಅಮೃತ ಎಂ. ಜವಳಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.