Kalaburagi | ಕೇಂದ್ರೀಯ ವಿವಿಯಲ್ಲಿ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್ಡಿ ಪದವಿ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಮಹಾಪ್ರಬಂಧಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಅವರಿಗೆ ಪಿಎಚ್.ಡಿ. ಪದವಿ ಘೋಷಿಸಿದೆ.
ಸಾಮಾಜಿಕ ಮತ್ತು ವರ್ತನಾ ವಿಜ್ಞಾನ ನಿಕಾಯದ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಶೈಕಾ ಪರ್ವೀನ್ ಹಾಗೂ ಎಂಜಿನಿಯರಿಂಗ್ ನಿಕಾಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಸಂತೋಷ ಅವರು ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಶೈಕಾ ಪರ್ವೀನ್ ಅವರು ‘ವಿಮೆನ್ ಇನ್ ದಿ ಫ್ರೀಡಂ ಸ್ಟ್ರಗಲ್: ಎ ಕೇಸ್ ಸ್ಟಡಿ ಆಫ್ ಬಿಹಾರ್ ಫ್ರಮ್ 1917 ಟು 1947’ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧ ಸಲ್ಲಿಸಿದ್ದರು. ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ರಮ್ಯಾ ವಿ.ಪಿ. ಅವರು ಮಾರ್ಗದರ್ಶನ ನೀಡಿದ್ದರು. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಮೊಹಮ್ಮದ್ ನಜ್ರುಲ್ ಬರಿ ಸಹಮಾರ್ಗದರ್ಶಕರಾಗಿದ್ದರು.
ಸಂತೋಷ ಅವರು ‘ಡೆವಲಪ್‌ಮೆಂಟ್ ಆಫ್ ಇಂಟೆಲಿಜೆಂಟ್ ಟೆಕ್ನಿಕ್ ಫಾರ್ ಮಿಟಿಗೇಟಿಂಗ್ ದಿ ಐಬಿಆರ್‌ಎಸ್ ಇಂಪ್ಯಾಕ್ಟ್ ಆನ್ ದಿ ಪವರ್ ಗ್ರಿಡ್’ ವಿಷಯದ ಕುರಿತು ಸಂಶೋಧನೆ ನಡೆಸಿದ್ದರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅರುಣಕುಮಾರ ಪಾಟೀಲ ಅವರು ಮಾರ್ಗದರ್ಶನ ನೀಡಿದ್ದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಪಿಎಚ್.ಡಿ. ಪದವಿ ಪಡೆದ ಇಬ್ಬರು ಸಂಶೋಧಕರು ಹಾಗೂ ಅವರ ಮಾರ್ಗದರ್ಶಕರನ್ನು ಅಭಿನಂದಿಸಿ, ಮುಂದಿನ ಶೈಕ್ಷಣಿಕ ಮತ್ತು ವೃತ್ತಿಪರ ಜೀವನದಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿ ಎಂದು ಶುಭ ಹಾರೈಸಿದ್ದಾರೆ.