Kalaburagi | ಜನಪದ ಕಲೆ ಉಳಿಸಿ ಬೆಳೆಸಿರಿ : ನೀಲಕಂಠರಾವ ಮೂಲಗೆ
ಕಲಬುರಗಿ : ನಮ್ಮ ಆಧುನಿಕ ಜೀವನ ಶೈಲಿಯಲ್ಲಿ ಜನಪದ ಕಲೆಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ನೀಲಕಂಠರಾವ ಮೂಲಗೆ ಕರೆ ನೀಡಿದರು.
ನಗರದ ಕನ್ನಡ ಭವನದಲ್ಲಿ ಮಿನುಗುತಾರೆ ಮಹಿಳಾ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಏರ್ಪಡಿಸಿದ ಜನಪದ ಸೊಗಡು ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂಟರನೆಟ್ ಯುಗದಲ್ಲಿ ಬದುಕುತ್ತಿರುವ ನಾವುಗಳು ನಮ್ಮ ಮೂಲ ಜನಪದ ಪರಂಪರೆ ಮರೆಯಬಾರದು. ಕವಿ ಕಲಾವಿದರು ಜನಪದ ಸಂಭ್ರಮ ಜಿಲ್ಲೆಯಲ್ಲಿ ಇನ್ನಷ್ಟು ಹೆಚ್ಚಿಸಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್.ಧನ್ನಿ ಅಧ್ಯಕ್ಷತೆ ವಹಿಸಿ, ಜನಪದ ಕಲೆಗಳು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸುತ್ತವೆ. ಆದರೆ ಆ ಕಲೆಗಳು ನಶಿಸಿ ಹೋಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷೆ ಕಲ್ಪನಾ ಗೋಲ್ಡಸ್ಮಿತ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಕಲಾವಿದರಿಂದ ಜನಪದ ಹಾಡುಗಳು ಪ್ರಸ್ತುತ ಪಡಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಿವಕುಮಾರ ಸ್ವಾಮಿ ಖ್ಯಾತ ಉದ್ದಿಮೆದಾರ ಎಂ ಜಿ ಗಣಾಟಿ ಹಿರಿಯ ಸಂಗೀತ ಕಲಾವಿದರಾದ ಸಚಿನ ಪರತಾಬಾದ, ಬಸವರಾಜ ಸಾಲಿ, ನಾಗರಾಜ ಪರಾಂಕರ ಸಂಗೀತ ಕಲಾವಿದರು ಮತ್ತು ಅನನ್ಯ ನೃತ್ಯ ಕಲಾ ತಂಡದ ವತಿಯಿಂದ ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಈ ಮುಖ್ಯ ಅತಿಥಿಗಳಾಗಿ ಶಿವಕುಮಾರ್ ಸ್ವಾಮಿ ಖ್ಯಾತ ಉದ್ದಿಮೆದಾರ ಶಿವಕುಮಾರ, ಕಲಾವಿದರಾದ ಬಸವರಾಜ ಸಾಲಿ, ನಾಗರಾಜ ಪರಾಂಕರ ಉಪಸ್ಥಿತರಿದ್ದರು. ನಾಗಲಿಂಗಯ್ಯ ತಾವರಮಠ ವಂದಿಸಿದರು.