ಕಲಬುರಗಿ : ನಗರದ ವಾರ್ಡ್ ನಂ. 52ರ ಅಕ್ಕಮಹಾದೇವಿ ಕಾಲೋನಿ, ದುರ್ಗಾಶಕ್ತಿ ಕಾಲೋನಿ, ವೀರಭದ್ರೇಶ್ವರ ಕಾಲೋನಿ, ಜಯತೀರ್ಥ ನಗರ, ನವಲದೆ ಲೇಔಟ್, ಶ್ರೀದತ್ತ ನಗರ ಹಾಗೂ ದೇಶಪಾಂಡೆ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದನ್ನು ಖಂಡಿಸಿ ನಿವಾಸಿಗಳು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

ಸಂತೋಷ್ ಕಾಲೋನಿಯ ಹನುಮಾನ್ ದೇವಸ್ಥಾನದ ಎದುರು ನಡೆದ ಪ್ರತಿಭಟನೆಯಲ್ಲಿ ನಿವಾಸಿಗಳು ಶಾಸಕ ಅಲ್ಲಮಪ್ರಭು ಪಾಟೀಲ ಅವರ ಭಾವಚಿತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಪ್ರದೇಶಗಳಲ್ಲಿ ಎಲ್ & ಟಿ ಸಂಸ್ಥೆಯಿಂದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದ್ದರೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಕುರಿತು ಇತ್ತೀಚೆಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ವಾರ್ಡ್‌ನ ಹಲವು ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಹೆಚ್ಚಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕಿ ಶೋಭಾ ಗುರುರಾಜ ದೇಸಾಯಿ, ಎಚ್.ಎ. ರೆಡ್ಡಿ, ಶ್ರೀನಿವಾಸ ದೇಸಾಯಿ, ಸಂಜೀವ ರೆಡ್ಡಿ, ರವೀಂದ್ರ ಕುಲಕರ್ಣಿ, ಚಂದ್ರಕಾoತ ಕುಲಕರ್ಣಿ, ರಾಜು ವಾಡೇಕರ, ಅರವಿಂದ ಹುಣಸಗಿ, ಜಯಕುಮಾರ ಮೂಲಿಮನಿ, ಕೇಶವ ಕಾಬಾ, ಜಗದೀಶ ಹುನಗುಂದ, ವಿಶ್ವನಾಥ ಸಾಲಿಮಠ, ರಾಜು ಪಾಟೀಲ, ಶೋಭಾ ಪಾಟೀಲ, ಜ್ಯೋತಿ ಪಾಟೀಲ, ಅಂಬಿಕಾ ಪಾಟೀಲ, ಶಾರದಾ ಚವ್ಹಾಣ, ನಿಂಗಪ್ಪ ಮಾಸ್ಟರ್, ದಶರಥ ಠಾಕೂರ, ಪ್ರಭು ಪಸಾರೆ, ಗುರುರಾಜ ದೇಶಪಾಂಡೆ, ಸಿದ್ರಾಮಪ್ಪ ಮಹಾಂಗಾವ, ನಿಂಗಪ್ಪ ಕುಂಬಿ, ಮಹಾದೇವಪ್ಪ ಕೊರಳ್ಳಿ, ರವೀಂದ್ರ ಜೋಶಿ, ಶ್ರೀಕಾಂತ ಹೊಸಮನಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor