×
Ad

ಕಲಬುರಗಿ | ಡಿ.28ರಂದು ರಾಯಲ್ ಅಕಾಡೆಮಿ ಪ್ರಶಸ್ತಿ ವಿತರಣೆ, ರಾಷ್ಟ್ರೀಯ ಕಲಾ ಪ್ರದರ್ಶನ

Update: 2025-12-27 14:40 IST

ಕಲಬುರಗಿ: ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಸಂಸ್ಥೆಯ ವತಿಯಿಂದ 21ನೇ ವಾರ್ಷಿಕ ಇಂಡಿಯನ್ ರಾಯಲ್ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿಗಳ ವಿತರಣೆ ಹಾಗೂ ಪ್ರಶಸ್ತಿ ಪಡೆದ ಕಲಾಕೃತಿಗಳ ಪ್ರದರ್ಶನವು ನಾಳೆ (ಡಿ.28ರಂದು) ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಕನ್ನಡ ಭವನದಲ್ಲಿರುವ ಸುವರ್ಣ ಕಲಾ ಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ರೆಹಮಾನ್ ಪಟೇಲ್ ಹೇಳಿದ್ದಾರೆ.

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಝಹೀರಾ ನಸೀಮ್ ಅವರು ಕಲಾ ಪ್ರದರ್ಶನವನ್ನು ಉದ್ಘಾಟಿಸಿ, ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ವರ್ಲ್ಡ್ವೈಡ್ ಆರ್ಟ್ ಮೂವ್ಮೆಂಟ್ ಅಧ್ಯಕ್ಷ ಆರ್.ಜಯಂತ್ ಕುಮಾರ್ ಹಾಗೂ ಬಹ್ಮನಿ ಫೌಂಡೇಶನ್ ಅಧ್ಯಕ್ಷ ರಿಜ್ವಾನ್ ಉರ್ ರಹ್ಮಾನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಕಾಡೆಮಿ ಅಧ್ಯಕ್ಷ ರೆಹಮಾನ್ ಪಟೇಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News