ಕಲಬುರಗಿ | ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ : ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
ಕಲಬುರಗಿ: ಹುಬ್ಬಳ್ಳಿ ತಾಲೂಕಿನ ಇನಾಮ ವೀರಪೂರ ಗ್ರಾಮದ ಮಾನ್ಯಳನ್ನು ಕೊಲೆ ಮಾಡಿ ಮಾದಿಗ ಸಮಾಜದ ವಿವೇಕಾನಂದ ರವರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಎಲ್ಲಾ ಆರೋಪಿಗಳನ್ನು ಬಂಧಿಸಿ, ಹಲ್ಲೆಗೊಳಗಾದ ಕುಟುಂಬಕ್ಕೆ ಸೂಕ್ತ ಪರಿಹಾರ, ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಡಾ.ಬಾಬು ಜಗಜೀವನರಾಮ ಅಭಿವೃದ್ಧಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಇನಾಮ ವೀರಪೂರ ಗ್ರಾಮದ ಮಾದಿಗ ಸಮಾಜದ ವಿವೇಕಾನಂದ ರವರ ಕುಟುಂಬದ ಮಾನ್ಯಳನ್ನು ಕೊಲೆ ಮಾಡಿ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಬಸಪ್ಪ, ಅನೀಲ ಗೌಡ ಸೇರಿದಂತೆ ಇತರರು ಕೂಡಿಕೊಂಡು ಕೊಲೆ ಮಾಡಿದಲ್ಲದೇ, ಹಲ್ಲೆ ಮಾಡಿದ್ದಾರೆ. ಇವರೆಲ್ಲರನ್ನೂ ಬಂಧಿಸಿ ನೊಂದ ಕುಟುಂಬಕ್ಕೆ 1 ಕೋಟಿ ರೂ. ಮತ್ತು ದೌರ್ಜನ್ಯ ಪ್ರಕರಣಕ್ಕೆ ಅನುಗುಣವಾಗಿ ಸರಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ದಲಿತರ ಮೇಲೆ ಹಲ್ಲೆ, ಕಗ್ಗೋಲೆ, ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ರಾಜ್ಯ ಸರಕಾರ ಯಾವುದೇ ರೀತಿಯಿಂದ ದಲಿತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯಿಂದ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಸೂಕ್ತ ಕಾನೂನು ಕ್ರಮ ಜಾರಿಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ರಾಜು ಎಸ್. ಕಟ್ಟಿಮನಿ, ದಶರಥ ಎಂ.ಕಲಗುರ್ತಿ, ರಮೇಶ ವಾಡೇಕರ, ಮಲ್ಲಿಕಾರ್ಜುನ ಜಿನಕೇರಿ, ಚಂದ್ರಕಾoತ ನಾಟೀಕಾರ, ಶರಣು ಎಸ್. ಸಗರಕರ, ಬಂಡೇಶ ರತ್ನಡಗಿ, ಪ್ರದೀಪ ಭಾವೆ, ಶ್ರೀನಿವಾಸ ರಾಮನಗರಕರ, ಮಲ್ಲಿಕಾರ್ಜುನ ದೊಡ್ಡಮನಿ, ಅನೀಲ ಬೇಳಕೇರಿ, ಪ್ರಕಾಶ ಗುಲ್ಲಾಬಾಡಿ, ಶರಣಪ್ಪ ರಾಜಾಪೂರ, ಮಲ್ಲಿಕಾರ್ಜುನ ಎಂ. ಸರಡಗಿ, ರಾಹುಲ್ ಮೇತ್ರೆ, ವಿನೋದ ಒಂಕಾರ, ರವಿ ಸಿಂಗೆ, ರಂಚಿತ ಮೂಲಿಮನಿ, ಮಹೇಶ ಮೂಲಿಮನಿ, ಹರಿಶ್ಚಂದ್ರ ದೊಡ್ಡಮನಿ, ಸಚ್ಚೇನ ಕಟ್ಟಿಮನಿ, ಚಂದಪ್ಪ ಕಟ್ಟಿಮನಿ, ರಾಜು ಮದಿರಾ(ಬಿ), ಹಣಮಂತ ಅಂಕಲಗಿ, ದತ್ತು ಭಾಸಗಿ, ಮಂಜುನಾಥ ನಾಲವಾರ, ಸಂಜುಕುಮಾರ ಮಾಳಗೆ, ಕುಶಾಲ ಕಟ್ಟಿಮನಿ, ಪ್ರಹ್ಲಾದ ಹಡಗಿಲ, ಸಿದ್ರಾಮ ಅವರಳ್ಳಿ, ರಮಾಕಾಂತ ಪೂಜಾರಿ, ಮರಲಿಂಗ ಅಣಗಿ, ಸುರೇಶ ಇಟಗಿ, ಹಣಮಂತ ರತ್ನಟಗಿ, ಗುಂಡು ಸಾಂಗವಾರ, ಧರ್ಮಾ ಸಂತ್ರಾಸವಾಗಿ, ಪ್ರದೀಪ ಬಾಚಿನಾಳ, ಸುರೇಶ ಹೊಸಮನಿ, ಸುನೀತಾ ಬಾಯಿ ಕೊಲ್ಲೂರ, ಈರಮ್ಮ ಎಸ್. ಕಟ್ಟಿಮನಿ, ವಿಜಯಲಕ್ಷ್ಮೀ ಹರನಾಳ, ಸಂತೋಷಮ್ಮಾ.ಸಿ., ರಂಜೀತಾ.ಎಂ ಸೇರಿದಂತೆ ಇತರರು ಇದ್ದರು.