×
Ad

ಕಲಬುರಗಿ: ವಿವಿ ಹಾಸ್ಟೆಲ್ ವಿದ್ಯಾರ್ಥಿನಿಯರ ಅಹೋರಾತ್ರಿ ಧರಣಿ

Update: 2024-07-09 22:38 IST

ಕಲಬುರಗಿ: ಎರಡು ದಿನದಿಂದ ಹಾಸ್ಟೆಲ್ ದಲ್ಲಿ ನೀರಿಲ್ಲ. ಶುಚಿತ್ವ ಕಿಟ್ ಕೊಟ್ಟಿಲ್ಲ. ಹಾಗೂ ಕಳೆದ ಮೂರು ದಿನಗಳಿಂದ ಊಟ ಸರಿಯಾಗಿ ಕೊಡ್ತಿಲ್ಲ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಬಿಸಿಎಂ ವಸತಿ ನಿಲಯದ ಮುಂದೆ ವಿದ್ಯಾರ್ಥಿನಿಯರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ವಿವಿಯ ಸಿಬ್ಬಂದಿಗಳಾಗಲಿ ಅಥವಾ ಹಿಂದುಳಿದ ವರ್ಗಗಳ ಅಧಿಕಾರಿಯಾಗಲಿ ಯಾರೂ ಭೇಟಿ ನೀಡಿಲ್ಲ. ಮಳೆ ಮತ್ತು ಚಳಿಯಲ್ಲಿಯೂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಪ್ರಭು ದೊರೆಗೆ ಫೋನ್ ಮಾಡಿದರೂ ಸಹ ನಾಳೆ ಬರುತ್ತೇನೆ ಎನ್ನುವ ಉತ್ತರ ನೀಡುತ್ತಿದ್ದಾರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕೆಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News